
ಮರ ಬಿದ್ದು ವಿದ್ಯುತ್ ಕಂಬಗಳಿಗೆ ಹಾನಿ
Sunday, July 6, 2025
ಮೂಡುಬಿದಿರೆ: ಇಲ್ಲಿನ ಲಾವಂತಬೆಟ್ಟು ಪರಿಸರದ ಏಕಮುಖ ಸಂಚಾರ ರಸ್ತೆಯಲ್ಲಿ ರವಿವಾರ ರಾತ್ರಿ ವೇಳೆಗೆ ಮರವೊಂದು ತುಂಡಾಗಿ ರಸ್ತೆಗುರುಳಿದ ಪರಿಣಾಮವಾಗಿ ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ.
ತಂತಿಗಳು ಕಡಿದು ಒಟ್ಟು ನಾಲ್ಕು ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ಘಟನೆ ನಡೆದ ವೇಳೆ ರಸ್ತೆಯಲ್ಲಿ ವಾಹನ ಸಂಚಾರ ಇತ್ತಾದರೂ ಅದೃಷ್ಟವಶಾತ್ ಜನ ವಾಹನಕ್ಕೆ ಯಾವುದೇ ಹಾನಿ ಉಂಟಾಗಿಲ್ಲ. ಮೆಸ್ಕಾಂ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಧಾವಿಸಿದ್ದು ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.