
ಜು.10 ರಿಂದ ದೈವಜ್ಞ ಶ್ರೀಗಳ ಚಾತುರ್ಮಾಸ್ಯ ಆರಂಭ
Sunday, July 6, 2025
ದಾವಣಗೆರೆ: ಉ.ಕ. ಜಿಲ್ಲೆಯ ಹೊನ್ನಾವರ ತಾಲೂಕಿನ ಕರ್ಕಿಯಲ್ಲಿರುವ ಶ್ರೀ ಜ್ಞಾನೇಶ್ವರಿ ಪೀಠದ ದೈವಜ್ಞ ಬ್ರಾಹ್ಮಣ ಮಠಾಧೀಶ್ವರರಾದ ಶ್ರೀ ಸಚ್ಚಿದಾನಂದ ಜ್ಞಾನೇಶ್ವರ ಭಾರತೀ ಮಹಾಸ್ವಾಮಿಗಳ 40ನೇ ವರ್ಷದ ಹಾಗೂ ಕಿರಿಯ ಶ್ರೀಗಳಾದ ಶ್ರೀ ಸುಜ್ಞಾನೇಶ್ವರ ಭಾರತೀ ಸ್ವಾಮೀಗಳವರ ದ್ವಿತೀಯ ವರ್ಷದ ಚಾತುರ್ಮಾಸ್ಯ ವ್ರತ ಸಂಕಲ್ಪ ಬೆಣ್ಣೆ ನಗರಿ ದಾವಣಗೆರೆಯಲ್ಲಿ ಗುರುಪೂರ್ಣಿಮೆ ದಿನ ಜು.10 ರಂದು ಬೆಳಗ್ಗೆ 10 ಗಂಟೆಯಿಂದ ಶ್ರೀಗಳವರಿಂದ ವ್ಯಾಸಪಂಚಕ ಪೂಜೆಯ ಮೂಲಕ ಚಾತುರ್ಮಾಸ್ಯ ವ್ರತ ಪೂಜೆ ಆರಂಭಗೊಳ್ಳಲಿದೆ.
ದೈವಜ್ಞ ಬ್ರಾಹ್ಮಣಸಮಾಜದ ವತಿಯಿಂದ ಗುರುಗಳ ಪಾದುಕಾ ಪೂಜೆ, ಸಭಾ ಕಾರ್ಯಕ್ರಮ, ಶ್ರೀಗಳವರ ಆಶೀರ್ವಚನ, ತೀರ್ಥ ಪ್ರಸಾದ, ಅನ್ನ ಸಂತರ್ಪಣೆ ನಡೆಯಲಿದೆ.
ಪ್ರತಿ ದಿನದ ಬೆಳಗ್ಗೆ 10.30 ರಿಂದ ಸಾಮೂಹಿಕ ‘ಪಾದುಕಾ ಪೂಜೆ’ ಶ್ರೀಗಳವರಿಂದ ವ್ಯಾಸಾಕ್ಷತೆ, ಮಧ್ಯಾಹ್ನ 12.30 ಕ್ಕೆ ಶ್ರೀಗಳ ಪಟ್ಟದ ದೇವರ ಮಹಾಪೂಜೆ, ಮಹಾಪ್ರಸಾದ. ಸಂಜೆ 6.30 ರಿಂದ ಭಜನೆ, ಸಹಸ್ರನಾಮ ಪಠಣ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ರಾತ್ರಿ 8 ಗಂಟೆಗೆ ಶ್ರೀಗಳಿಂದ ಪಟ್ಟದ ದೇವರ ಪೂಜೆ ಹಾಗೂ ಆಶೀರ್ವಚನ, ತೀರ್ಥ ಪ್ರಸಾದ ಹಾಗೂ ಅನ್ನ ಸಂತರ್ಪಣೆ ನಡೆಯಲಿದೆ.
ಸೆ.7 ರಂದು ಚಾತುರ್ಮಾಸ್ಯ ವ್ರತದ ಸೀಮೋಲ್ಲಂಘನ ಕಾರ್ಯಕ್ರಮ, ಬೆಳಗ್ಗೆ ಸೀಮೋಲ್ಲಂಘನ ಪೂಜೆ ಮತ್ತು ಮಹಾ ಅನ್ನಸಂತರ್ಪಣೆ ನಡೆಯಲಿದೆ ಎಂದು ಶ್ರೀ ಮಠದ ಪ್ರಕಟಣೆ ತಿಳಿಸಿದೆ.