ಆನೆಗುಡ್ಡೆಯಲ್ಲಿ ವನಮಹೋತ್ಸವ, ಸಸಿ ವಿತರಣೆ

ಆನೆಗುಡ್ಡೆಯಲ್ಲಿ ವನಮಹೋತ್ಸವ, ಸಸಿ ವಿತರಣೆ


ಮೂಡುಬಿದಿರೆ: ತಾಲೂಕಿನ ವಾಲ್ಪಾಡಿ ಗ್ರಾಮದ ಆನೆಗುಡ್ಡೆ ಚರ್ಚ್, ಸಂತ ವಿನ್ಸೆಂಟ್ ಪಾವ್ಲ್ ಸಭಾ ಆನೆಗುಡ್ಡೆ, ವೈ.ಸಿ.ಎಸ್ ಆನೆಗುಡ್ಡೆ ಇವುಗಳ ಜಂಟಿ ಆಶ್ರಯದಲ್ಲಿ ಮೂಡುಬಿದಿರೆ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಚಚ್೯ನ ಆವರಣದಲ್ಲಿ  ವನಮಹೋತ್ಸವ ಹಾಗೂ ಸಸಿ ವಿತರಣಾ ಕಾರ್ಯಕ್ರಮವು ರವಿವಾರ ನಡೆಯಿತು. 


ಸಂತ ಪ್ರಾನ್ಸಿಸ್ ಝ್ಷೇವಿಯರ್ ಚರ್ಚ್ ನ ಧಮ೯ಗುರು ಫೌವ್ಲ್ ಡಿ'ಸೋಜ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಪ್ರಕೃತಿಯಿಂದಾಗಿ ನಾವಿದ್ದೇವೆ ಆದ್ದರಿಂದ ಪ್ರಕೃತಿಗೆ ಪೂರಕವಾದ ಕೆಲಸವನ್ನು ಮಾಡೋಣ. ಪ್ರತಿಯೊಬ್ಬರೂ ಗಿಡಗಳನ್ನು ನೆಟ್ಟು ಬೆಳೆಸುವಂತೆ ಕಿವಿಮಾತು ಹೇಳಿದರು.


ಇನ್ನೋವ೯ ಮುಖ್ಯ ಅತಿಥಿ ಉಪ ವಲಯ ಅರಣ್ಯಾಧಿಕಾರಿ  ಬಸಪ್ಪ ಹಲಗೇರ ಅವರು ಮಾತನಾಡಿ ಅರಣ್ಯ ಸಂರಕ್ಷಣೆ, ನೀರಿನ ಸಂರಕ್ಷಣೆ ಹಾಗೂ ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ಆಗುವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

 ಕಾರ್ಯಕ್ರಮದಲ್ಲಿ  ಚಚ್೯ನ ಪಾಲನಾ ಮಂಡಳಿಯ ಉಪಾಧ್ಯಕ್ಷ  ದಿಲೀಪ್ ಡಿಕುನ್ಹಾ, ಕಾಯ೯ದಶಿ೯ ರಾಬಟ್೯ ಡಿಕುನ್ಹಾ, ಗಸ್ತು ಅರಣ್ಯ ಪಾಲಕ  ಧರ್ಮರಾಜ ಅತಿಥಿಗಳಾಗಿ ಭಾಗವಹಿಸಿದ್ದರು.  

ನೋಬರ್ಟ ಪಿರೇರಾ ಸ್ವಾಗತಿಸಿದರು. ಸಂತೋಷ ಸಲ್ದಾನ ಕಾರ್ಯಕ್ರಮ ನಿರೂಪಿಸಿದರು. ವೈ.ಸಿ.ಯಸ್.ನ ಸಂಯೋಜಕಿ ಶೈನಿ ಸಲ್ದಾನ  ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article