
ಜಿಲ್ಲೆಯ ಜನರ ಜತೆ ಚೆಲ್ಲಾಟವಾಡಿದರೆ, ಜಿಲ್ಲೆಗೆ ಕಾಲಿಡಲೂ ಬಿಡುವುದಿಲ್ಲ: ಉಸ್ತುವಾರಿಗೆ ಬಿಜೆಪಿ ಡಾ. ಭರತ್ ಶೆಟ್ಟಿ ವೈ ನೇರ ಎಚ್ಚರಿಕೆ
ಕಾವೂರು: ಬಿಜೆಪಿ ಸರಕಾರ ಇದ್ದಾಗ ಒಂದು ವಾರದಲ್ಲಿ 200ಕ್ಕೂ ಅಕ ಪರವಾನಿಗೆ ನೀಡಿ ಸಮಸ್ಯೆ ಬಗೆ ಹರಿಸಿತ್ತು. ಆದರೆ ಕಾಂಗ್ರೆಸ್ ಗೆ ತಿಂಗಳು ಕಳೆದರೂ ಸಾಧ್ಯ ಆಗುತ್ತಿಲ್ಲ. ಮರಳು, ಕೆಂಪು ಕಲ್ಲು ಗೆ ದುಬಾರಿ ತೆರಿಗೆ ಹಾಕಿ ಜನರು ಮನೆ ಕಟ್ಟಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಸೋತ ರಾಜಕೀಯ ಪುಡಾರಿಗಳು ಕೇವಲ ಹಣ ಮಾಡುವಲ್ಲಿ ಇಂತಹ ಕೆಲಸ ಮಾಡುತ್ತಿದ್ದುಜಿಲ್ಲಾ ಉಸ್ತುವಾರಿ ಸಚಿವರು ರಿಮೋಟ್ ಮೂಲಕ ಬೆಂಗಳೂರಿನಲ್ಲಿ ಆಡಳಿತ ಮಾಡುತಿದ್ದಾರೆ. ಇದೆ ರೀತಿ ಆಡಳಿತ ಮುಂದುವರಿದರೆ ಜಿಲ್ಲೆಗೆ ಕಾಲಿಡಲು ಬಿಡುವುದಿಲ್ಲ ಶಾಸಕ ಡಾ. ಭರತ್ ಶೆಟ್ಟಿ ವೈ. ಎಚ್ಚರಿಕೆ ನೀಡಿದರು.
ರಾಜ್ಯ ಸರಕಾರದ ಜನ ವಿರೋಧಿ ನಡೆಯಿಂದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೆಂಪುಕಲ್ಲು ಮತ್ತು ಮರಳು ಸಿಗದಂತಾಗಿದೆ ಎಂದು ಆರೋಪಿಸಿ ಕಾವೂರಿನಲ್ಲಿ ಮಂಗಳೂರು ಉತ್ತರ ಮಂಡಲ ಆಯೋಜಿಸಿದ್ದ ಪ್ರತಿಭ ಟನಾ ಸಭೆ ಯಲ್ಲಿ ಮಾತನಾಡಿದರು.
ರಾಜ್ಯದ ಪ್ರಸ್ತುತ ಕಾಂಗ್ರೆಸ್ ಸರಕಾರ ಕುರ್ಚಿ ಉಳಿಸಿಕೊಳ್ಳುವಲ್ಲಿ, ವರ್ಗಾವಣೆ ದಂದೆ ಮೂಲಕ ಹಣ ಮಾಡುವಲ್ಲಿ ಆಸಕ್ತಿ ಹೊಂದಿದೆ. ಆದರೆ ಜನ ಪರ ಕೆಲಸ ಮಾಡಲು ಆಸಕ್ತಿ ಕಳೆದುಕೊಂಡಿದೆ. ಹಣ ನೀಡಿ ಕೆಲಸ ಮಾಡಿಕೊಳ್ಳಿ ಎಂಬುದಷ್ಟೇ ಪ್ರಸ್ತುತ ಸರಕಾರದ ನೀತಿ. ಸೂಕ್ತ ಲೀಸ್ ಮಾಡಿ ಕೊಟ್ಟು, ರಾಯಲ್ಟಿ ಪಡೆಯಿರಿ,ಆದರೆ ಜನರ, ಕಾರ್ಮಿಕರ ರಕ್ತ ಹೀರಿ ದುಬಾರಿ ರಾಯಲ್ಟಿ ಹಾಕಿ ಜನ ಮನೆ ಕಟ್ಟಲು ಸಾಧ್ಯವೇ? ಎಂದು ಗುಡುಗಿದರು.
ಪೊಲೀಸರು ಕಾನೂನು ಬಿಗಿ ಮಾಡಿದರೂ, ನೀವು ಸೂಕ್ತ ಪರವಾನಿಗೆ ಕೊಡಿ ಇದರಿಂದ ಸಮಸ್ಯೆ ಬಗೆ ಹರಿಯಲಿದೆ ಎಂದರು.
ಇದರಿಂದ ನಿರ್ಮಾಣ ಕಾಮಗಾರಿಗಳು ಸಂಪೂರ್ಣ ಸ್ಥಗಿತ ಗೊಂಡಿದ್ದು, ಕಟ್ಟಡ ನಿರ್ಮಾಣ ಕಾರ್ಮಿಕರು, ಲಾರಿ ಚಾಲಕರು ಎಲ್ಲರೂ ಇಂದು ಬೀದಿಗೆ ಬೀಳುತ್ತಿದ್ದಾರೆ. ಬಿಜೆಪಿ ಎಂದಿಗೂ ಇಂತಹ ಕೆಲಸ ಮಾಡಿಲ್ಲ. ನಾವೂ ಕೂಡ ಪಕ್ಷಾತೀತವಾಗಿ ಆಡಳಿತ ನಡೆಸಿದ್ದೇವೆ .ಇಂತಹ ನಿಕೃಷ್ಟ ಸರಕಾರ ಇದುವರೆಗೆ ಕಂಡಿಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಮಾಜಿ ವಿಧಾ ನ ಪರಿಷತ್ ಸದಸ್ಯರಾದ ಮೋನಪ್ಪ ಭಂಡಾರಿ ಮಾತನಾಡಿ, ಕಟ್ಟಡ ನಿರ್ಮಾಣ ನಿಲ್ಲಲು ರಾಜ್ಯ ಸರಕಾರ ನೇರ ಕಾರಣ. ಬಡವರು ಮತ್ತಷ್ಟು ಬಡವರಾಗಿದ್ದಾರೆ. ಗ್ಯಾರಂಟಿ ನೀಡಿ ರಾಜ್ಯಕ್ಕೆ ಕುತ್ತು ತಂದಿದ್ದಾರೆ. ಸರಕಾರಿ ಸಿಬ್ಬಂದಿಗಳಿಗೆ ವೇತನ ನೀಡಲಾಗುತ್ತಿಲ್ಲ. ಕಲ್ಲು, ಮರಳು ನಿಲ್ಲಿಸಿ,ಜಿಲ್ಲೆಯ ಉಸ್ತುವಾರಿ ಸಚಿವರು ಒಂದು ವಾರದಲ್ಲಿ ಸಮಸ್ಯೆ ಬಗೆ ಹರಿಸುವ ಭರವಸೆ ನೀಡಿ ನಾಪತ್ತೆಯಾಗಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಅವರು ಕುರ್ಚಿಗೆ ಅಂಟಿಕೊಂಡಿದ್ದು, ಅದನ್ನು ಉಳಿಸಿಕೊಳ್ಳಲು ಕೆಲಸ ಮಾಡುತ್ತಿದ್ದಾರೆ. ಜನರ ಚಿಂತೆ ಬಿಟ್ಟಿದ್ದಾರೆ ಎಂದು ಕಿಡಿ ಕಾರಿದರು. ಯು.ಟಿ ಖಾದರ್ ಭರವಸೆ ನೀಡುತ್ತಾ ಜನರನ್ನು ಮೋಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಜಿಲ್ಲಾ ಉಪಾಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಮಾತನಾಡಿ, ಜನರ ಅಗತ್ಯ ವಸ್ತುಗಳಿಗೆ ದುಬಾರಿ ತೆರಿಗೆ ವಿಸಿ ಜೀವನ ಕ್ಕೆ ಕಂಟಕ ತಂದಿಟ್ಟಿದ್ದಾರೆ ಎಂದರು. ಸಾವಿರಾರು ಮಂದಿ ಸರಕಾರದ ತಲೆ ಬುಡವಿಲ್ಲದ ನೀತಿಯಿಂದ ಕಾರ್ಮಿಕರು ನಿರ್ಗತಿಕರಾಗುವಂತೆ ಮಾಡಿದ ಸಾಧನೆ ಸರಕಾರದ್ದಾಗಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಬಿಜೆಪಿ ಪ್ರಮುಖರಾದ ರಾಜೇಶ್ ಕೊಟ್ಟಾರಿ, ಜನಾರ್ಧ ನ್ ಗೌಡ, ಪೂಜಾ ಪೈ, ಶಾಂವಾಜ್ ಹುಸೇನ್, ರಣದೀಪ್ ಕಾಂಚನ್, ಮಾಜಿ ಮನಪಾ ಸದಸ್ಯರು, ಜಿ.ಪಂ ಸದಸ್ಯರು ವಿವಿಧ ಉಪ ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.