
ಜು.6 ರಂದು ಕಿನ್ನಿಗೊಳಿಯಲ್ಲಿ ಹಲಸು ಮಾವು ಮೇಳ
Thursday, July 3, 2025
ಕಿನ್ನಿಗೋಳಿ: ಇಲ್ಲಿನ ರಾಜರತ್ನಪುರ ಅಣ್ಣಯ್ಯಾಚಾರ್ಯ ಸಭಾಭವನದಲ್ಲಿ ಜು.6 ರಂದು ಮೂರನೇ ವರ್ಷದ ಹಲಸು, ಮಾವು ಮೇಳ, ಸಾವಯವ ವಸ್ತುಗಳ ಪ್ರದರ್ಶನ, ಮಾರಾಟ ನಡೆಯಲಿದೆ. ವೈವಿಧ್ಯಮಯ ಸಾವಯವ ಹಣ್ಣುಗಳು, ತರಕಾರಿ ಬೀಜ, ಗಿಡಗಳು, ಸಾವಯವ ವಸ್ತುಗಳು, ತಿನಿಸುಗಳ ಮಾರಾಟ ನಡೆಯಲಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.