ನಗರಾಭಿವೃದ್ಧಿ ಪ್ರಾಧಿಕಾರಗಳ ಒಕ್ಕೂಟದಿಂದ ಸಚಿವರ ಮತ್ತು ಶಾಸಕರ ಭೇಟಿ: ಸಕಾರಾತ್ಮಕ ಸ್ಪಂದನೆ

ನಗರಾಭಿವೃದ್ಧಿ ಪ್ರಾಧಿಕಾರಗಳ ಒಕ್ಕೂಟದಿಂದ ಸಚಿವರ ಮತ್ತು ಶಾಸಕರ ಭೇಟಿ: ಸಕಾರಾತ್ಮಕ ಸ್ಪಂದನೆ


ಮಂಗಳೂರು: ದ.ಕ. ಮತ್ತು ಉಡುಪಿ ಜಿಲ್ಲೆಗಳ ನಗರಾಭಿವೃದ್ಧಿ ಮತ್ತು ಯೋಜನಾ ಪ್ರಾಧಿಕಾರಗಳ ಒಕ್ಕೂಟದ ವತಿಯಿಂದ ಇಂದು ಬೆಂಗಳೂರಿನಲ್ಲಿ ನಗರಾಭಿವೃದ್ಧಿ ಮತ್ತು ನಗರಯೋಜನೆ ಸಚಿವ ಭೈರತಿ ಸುರೇಶ್, ವಿಧಾನ ಪರಿಷತ್ ಶಾಸಕ ಐವನ್ ಡಿ’ಸೋಜಾ, ಕೆಪಿಸಿಸಿ ಕಾರ್ಯಧ್ಯಕ್ಷ ಮತ್ತು ವಿಧಾನ ಪರಿಷತ್ ಶಾಸಕ ಮಂಜುನಾಥ್ ಭಂಡಾರಿ, ಮಾಜಿ ಸಚಿವರುಗಳಾದ ಬಿ. ರಮಾನಾಥ ರೈ, ವಿನಯಕುಮಾರ್ ಸೊರಕೆ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಆಯುಕ್ತ ವೆಂಕಟಾಚಾಲಪತಿ ಮೊದಲಾದವರನ್ನು ಭೇಟಿ ಮಾಡಿ ಕರಾವಳಿ ಜಿಲ್ಲೆಗಳಿಗೆ ಪ್ರತ್ಯೇಕ ವಲಯ ನಿಯಮಾವಳಿ, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 9/11 ವಿನ್ಯಾಸ ಅನುಮೋದನೆ, ಕನ್ವರ್ಷನ್, ಕಟ್ಟಡ ನಿರ್ಮಾಣ ಪರವಾನಿಗೆ ಮೊದಲಾದ ನಿಯಮಗಳಲ್ಲಿ ಸರಳೀಕರಣ ಮಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ ಉಳ್ಳಾಲ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ, ಒಕ್ಕೂಟದ ಸಂಚಾಲಕ ದಿನಕರ್ ಹೆರೂರ್, ಒಕ್ಕೂಟದ ಸಂಚಾಲಕ, ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎಂ. ಮುಸ್ತಫ ಸುಳ್ಯ, ಬಂಟ್ವಾಳ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯರುಗಳಾದ ಅಬ್ದುಲ್ ಜಲೀಲ್ ನೀರಜ್ ಪಾಲ್, ಮೂಡಬಿದ್ರಿ ಪ್ರಾಧಿಕಾರ ಸದಸ್ಯ ಸತೀಶ್ ಕೆ. ಉಡುಪಿ ಪ್ರಾಧಿಕಾರ ಸದಸ್ಯ ಗಿರೀಶ್ ಕುಂದರ್, ಉಡುಪಿ ಭೂ ನ್ಯಾಯ ಮಂಡಳಿ ಸದಸ್ಯರೋಯ್ಸ್ ಉದ್ಯಾವರ, ಕಾಂಗ್ರೆಸ್ ಮುಖಂಡರಾದ ತಾಯಿನಾತ್ ಬೊಳಂಜ ಮೊದಲಾದವರು ನಿಯೋಗದಲ್ಲಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article