
ಪ್ಲಾಸ್ಟಿಕ್ ಮುಕ್ತ ಸಮಾಜ: ಬಟ್ಟೆಯ ಚೀಲಗಳ ಬೃಹತ್ ಪ್ರದರ್ಶನ
Wednesday, July 2, 2025
ಕುಂದಾಪುರ: ‘ಪ್ಲಾಸ್ಟಿಕ್ ಮುಕ್ತ ಸಮಾಜ’ ಧ್ಯೇಯದೊಂದಿಗೆ ಬಟ್ಟೆಯ ಚೀಲಗಳ ಬೃಹತ್ ಪ್ರದರ್ಶನ ಜುಲೈ 3 ರಿಂದ 15 ರ ತನಕ ಏರ್ಪಡಿಸಲಾಗಿದೆ. ಕುಂದಾಪುರ ಬಸ್ ನಿಲ್ದಾಣದ ಬಳಿ, ರಾಮ ಮಂದಿರ ರಸ್ತೆಯಲ್ಲಿ, ವಿಜಯಾ ಟೆಕ್ಸ್ಟೈಲ್ ಎದುರು ಇರುವ ರಮಾನಂದ ಭಟ್ ವಠಾರದಲ್ಲಿ ಈ ಪ್ರದರ್ಶನ ನಡೆಯಲಿದೆ. ವೈವಿಧ್ಯಮಯ ಬಣ್ಣದ ವಿವಿಧ ಅಳತೆಯ ಚೀಲಗಳಿದ್ದು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸಾರ್ವಜನಿಕರು ಆಗಮಿಸಿ, ಸಲಹೆ, ಸೂಚನೆ ನೀಡಬಹುದು. ಪರಿಸರ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಗೆಳೆಯರ ಸ್ವಾವಲಂಬಿ ಸಂಘದ ಸಂಚಾಲಕ ವೆಂಕಟೇಶ ಪೈ ವಿನಂತಿಸಿದ್ದಾರೆ.
ಸುಮಾರು 200ಕ್ಕೂ ಹೆಚ್ಚು ಮಹಿಳೆಯರು ಗೆಳೆಯರ ಸ್ವಾವಲಂಬಿ ಸಂಘದ ಮಾರ್ಗದರ್ಶನದಲ್ಲಿ ಬಟ್ಟೆ ಚೀಲ ಹೊಲಿಯುತ್ತಿದ್ದು, ಸ್ವಉದ್ಯೋಗಕ್ಕೆ ಪ್ರೋತ್ಸಾಹ ನೀಡಲಾಗುತ್ತಿದೆ. ಸಾರ್ವಜನಿಕರು ಈ ಅಭಿಯಾನಕ್ಕೆ ಪ್ರೋತ್ಸಾಹ ನೀಡಬೇಕೆಂದು ಮಹಿಳೆಯರು ಕೋರಿದ್ದಾರೆ.
ಹೆಚ್ಚಿನ ವಿವರಗಳಿಗೆ ಯೋಜನಾಧಿಕಾರಿ 9224102053 ದೂರವಾಣಿ ಮೂಲಕ ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.