ಜಿಲ್ಲಾ ಮಟ್ಟದ ‘ಕೃಷ್ಣಮಯ-2025’ ಕೃಷ್ಣ ವೇಷ ಸ್ಪರ್ಧೆ

ಜಿಲ್ಲಾ ಮಟ್ಟದ ‘ಕೃಷ್ಣಮಯ-2025’ ಕೃಷ್ಣ ವೇಷ ಸ್ಪರ್ಧೆ


ಮಂಗಳೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಶಕ್ತಿನಗರ, ಶಕ್ತಿ ಪೂರ್ವ ಪ್ರಾಥಮಿಕ ಶಾಲೆ, ಶಕ್ತಿ ವಸತಿ ಶಾಲೆ ಮತ್ತು ಶಕ್ತಿ ಪಪೂ ಕಾಲೇಜು ವತಿಯಿಂದ ಜಿಲ್ಲಾ ಮಟ್ಟದ ಕೃಷ್ಟಮಯ-2025 ಕೃಷ್ಣ ವೇಷ ಸ್ಪರ್ಧೆ ಅ.2 ರಂದು ಬೆಳಗ್ಗೆ 9 ಗಂಟೆಗೆ ಶಕ್ತಿ ವಸತಿ ಶಾಲೆ ಶಕ್ತಿನಗರದಲ್ಲಿ ಆಯೋಜಿಸಲಾಗಿದೆ. 


ಸ್ಪರ್ಧೆಗಳ ವಿವರಗಳು:

ವಿಭಾಗ 1ರಲ್ಲಿ 3 ವರ್ಷ ತನಕದ ಮಕ್ಕಳಿಗೆ ಬೆಣ್ಣೆ ಕೃಷ್ಣ, 3 ರಿಂದ 6 ವರ್ಷ ತನಕದ ಮಕ್ಕಳಿಗೆ ಬಾಲಕೃಷ್ಣ, 1 ರಿಂದ 4ನೇ ತರಗತಿಯ ಮಕ್ಕಳಿಗೆ ಯಶೋದ ಕೃಷ್ಣ, 5 ರಿಂದ 7ನೇ ತರಗತಿಯ ಮಕ್ಕಳಿಗೆ ದಾಸರ ಕೀರ್ತನೆಗಳು, 8 ರಿಂದ 10ನೇ ತರಗತಿಯ ಮಕ್ಕಳಿಗೆ ಗೋಪಿಕಾ ಕೃಷ್ಣ. 

ಗೀತಾ ಕಂಠಪಾಠ ಸ್ಪರ್ಧೆಯಲ್ಲಿ 1-5ನೇ ತರಗತಿಯ ಮಕ್ಕಳಿಗೆ ಧ್ಯಾನ ಶ್ಲೋಕ 1-8, 6 ರಿಂದ 7ನೇ ತರಗತಿಯ ಮಕ್ಕಳಿಗೆ ಅಧ್ಯಾಯ-12(1-10ನೇ ಶ್ಲೋಕ), 8 ರಿಂದ 10ನೇ ತರಗತಿಯ ಮಕ್ಕಳಿಗೆ ಅಧ್ಯಾಯ-15, (1-10ನೇ ಶ್ಲೋಕ), 

ಚಿತ್ರಕಲಾ ಸ್ಪರ್ಧೆ 8 ರಿಂದ 10ನೇ ತರಗತಿಯ ಮಕ್ಕಳಿಗೆ ಶ್ರೀ ಕೃಷ್ಣನ ಬಾಲ ಲೀಲೆಗಳು. ಕುಣಿತ ಭಜನೆ 6 ರಿಂದ 10 ತರಗತಿಯ ಮಕ್ಕಳಿಗೆ, ಶ್ರೀ ಕೃಷ್ಣನ ಭಜನೆಗಳು 10 ಜನರ ತಂಡಕ್ಕೆ 4 ನಿಮಿಷ ಅವಕಾಶ ನೀಡಲಾಗಿದೆ. ಒಂದು ಶಾಲೆಯಿಂದ ಎಷ್ಟು ತಂಡಗಳಿಗೂ ಭಾಗವಹಿಸುವ ಅವಕಾಶವಿದೆ. 

ವೆಬ್‌ಸೈಟ್ ನೋಂದಣಿಗೆ ಹಾಗೂ ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ shakthi.edu.in, email: schooloffice@shakthi.edu.in ಮತ್ತು ದೂರವಾಣಿ ಸಂಖ್ಯೆ 7349244086/9686000046 ಗೆ ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article