‘ಎಂಆರ್‌ಪಿಎಲ್‌ನಲ್ಲಿ ದುರ್ಘಟನೆ: ಮೃತರ ಕುಟುಂಬಕ್ಕೆ ಉದ್ಯೋಗ ಕೊಡಿ: ಆಗ್ರಹ

‘ಎಂಆರ್‌ಪಿಎಲ್‌ನಲ್ಲಿ ದುರ್ಘಟನೆ: ಮೃತರ ಕುಟುಂಬಕ್ಕೆ ಉದ್ಯೋಗ ಕೊಡಿ: ಆಗ್ರಹ


ಮಂಗಳೂರು: ಎಂಅರ್‌ಪಿಎಲ್ ಸಂಸ್ಥೆಯಲ್ಲಿ ಮೊನ್ನೆ ನಡೆದ ದುರ್ಘಟನೆಯಲ್ಲಿ ಇಬ್ಬರು ಉದ್ಯೋಗಿಗಳು ಮೃತರಾಗಿದ್ದು, ಅವರಿಗೆ ಸಂಸ್ಥೆಯಲ್ಲಿ ಸಿಗಬೇಕಾದ ಸವಲತ್ತುಗಳು ಆದಷ್ಟು ಶೀಘ್ರವಾಗಿ ಸಿಗಬೇಕು ಹಾಗೂ ಅವರಿಬ್ಬರ ಪತ್ನಿಯರಿಗೆ ಸಂಸ್ಥೆಯಲ್ಲಿ ಉದ್ಯೋಗ ಒದಗಿಸಿಕೊಡಬೇಕು ಎಂದು ಒತ್ತಾಯಿಸಿ ಎಂಅರ್‌ಪಿಎಲ್ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಎಂಅರ್‌ಪಿಎಲ್ ಕಾರ್ಗೋಗೇಟ್ ಬಳಿ ಇಂದು ಬೆಳಗ್ಗೆ ಪ್ರತಿಭಟನೆ ನಡೆಯಿತು. 

ಪ್ರತಿಭಟನೆಗೆ ಅಗಮಿಸಿದ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ವೈ. ಶೆಟ್ಟಿ ಪ್ರತಿಭಟನಾಕಾರರಿಗೆ ನ್ಯಾಯ ಒದಗಿಸಿಕೊಡುವ ಭರವಸೆ ನೀಡಿದರು. ಹಾಗೂ ಪೋನ್ ಮೂಲಕ ಎಂಅರ್‌ಪಿಎಲ್ ಸಂಸ್ಥೆಯ ಆಡಳಿತ ನಿರ್ದೇಶಕರಿಗೆ ಮಾತನಾಡಿ, ಮೃತ ಹೊಂದಿದ ಇಬ್ಬರು ಎಂಪ್ಲಾಯಿಸ್ ಪತ್ನಿಯರಿಗೆ ಸಂಸ್ಥೆಯಲ್ಲಿ ಉದ್ಯೋಗ ನೀಡಬೇಕು. ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರೂ ಮಾನವೀಯ ನೆಲೆಯಲ್ಲಿ ನೀಡಬೇಕು ಎಂದು ಹೇಳಿದರು. ಅದಕ್ಕೆ ಅಡಳಿತ ನಿರ್ದೇಶಕರು ಈ ಬಗ್ಗೆ ಆಡಳಿತ ಮಂಡಳಿಯ ಗಮನಕ್ಕೆ ತಂದು ಸೂಕ್ತ ತೀರ್ಮಾನ ಕೈಗೊಳ್ಳಲು ಪ್ರಯತ್ನಿಸುತ್ತೇವೆ ಎಂದರು.

ಎಂಅರ್‌ಪಿಎಲ್ ಸಂಸ್ಥೆಯಲ್ಲಿ ನಡೆದ ರ್ದುರ್ಘಟನೆ ವಿಷಾದನೀಯ:

ಈ ಬಗ್ಗೆ ಎಂಅರ್‌ಪಿಎಲ್ ಸಂಸ್ಥೆಯ ಆಡಳಿತ ನಿರ್ದೇಶಕರಿಗೆ ಮತ್ತು ಎಚ್.ಅರ್. ವಿಭಾಗದ ಗ್ರೂಪ್ ಜನರಲ್ ಮ್ಯಾನೇಜರ್ ಅವರಿಗೆ ಪೋನ್ ಮೂಲಕ ಮಾತನಾಡಿ, ಎರಡು ಎಂಪ್ಲಾಯಿಸ್ ಮೃತರಾದ ಕಾರಣ ಅವರಿಬ್ಬರ ಪತ್ನಿಯರಿಗೆ ಉದ್ಯೋಗ ನೀಡುವರೇ ಕಾನೂನಿನಲ್ಲಿ ಅವಕಾಶ ಇಲ್ಲದಿದ್ದರು ಮಾನವೀಯ ನೆಲೆಯಲ್ಲಿ ನೀಡಬೇಕು ಮತ್ತು ಅವರಿಗೆ ಸಂಸ್ಥೆಯಿಂದ ಸಿಗುವ ಸವಲತ್ತುಗಳು ಅದಷ್ಟು ಶೀಘ್ರವಾಗಿ ಸಿಗಬೇಕು ಹಾಗೂ ಎಂಅರ್‌ಪಿಎಲ್ ಸಂಸ್ಥೆಯಲ್ಲಿ ಸರಿಯಾದ ಸುರಕ್ಷತೆ ಇಲ್ಲದೆ ಎಂಪ್ಲಾಯಿಸ್ ಮತ್ತು ಅನೇಕ ಜನ ಕೂಲಿ ಕಾರ್ಮಿಕರು ಈಗಾಗಲೇ ಮೃತರಾಗಿದ್ದು, ಸಂಸ್ಥೆ ಸೂಕ್ತ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ, ಸಂಸದರ ನೇತೃತ್ವದಲ್ಲಿ ಸಭೆ ನಡೆಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು. ಮೃತ ಹೊಂದಿದ ನೈಜ ಘಟನೆ ಬಗ್ಗೆ ಕಾನೂನು ರೀತಿ ಕ್ರಮ ಕೈಗೊಳ್ಳಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು.

ಎಂಅರ್‌ಪಿಎಲ್ ಸಂಸ್ಥೆಯು ಕೇಂದ್ರ ಸರಕಾರದ ಸಂಸ್ಥೆಯಾಗಿದ್ದು ಆದರೆ ಸಂಸ್ಥೆಯ ಒಳಗಡೆ ಸರಿಯಾದ ಸುರಕ್ಷತಾ ಕ್ರಮ ಇಲ್ಲ ಸಂಸ್ಥೆಯು ಹೊರಗಡೆ ಸಂಘ ಸಂಸ್ಥೆಗಳಿಗೆ, ಶಾಲಾ ಕಾಲೇಜುಗಳಿಗೆ ಅದೆಷ್ಟೋ ಖರ್ಚು ಮಾಡಿ ಸುರಕ್ಷತಾ ಸಪ್ತಾಹದಂತಹ ಕಾರ್ಯಕ್ರಮ ಮಾಡಿ ಮಾಹಿತಿ ನೀಡುತ್ತಾರೆ ಅದರೆ ಸಂಸ್ಥೆಯ ಒಳಗೆ ಕಾರ್ಮಿಕರಿಗೆ ಯಾವುದೇ ರೀತಿಯ ಸುರಕ್ಷತೆ ಇಲ್ಲ ಸಂಸ್ಥೆಯ ಕೆಲವು ವಿಭಾಗದ ಇಂಜಿನಿಯರ್‌ಗಳು ಕಾರ್ಮಿಕರನ್ನು ಅಪಾಯದ ಸ್ಥಳಗಳಿಗೆ ಸುರಕ್ಷತಾ ಸಲಕರಣೆ ಇಲ್ಲದೆ ಕಳುಹಿಸುತ್ತಿರುವುದು ಅನೇಕ ಕೂಲಿ ಕಾರ್ಮಿಕರು ಸಾವಿಗೀಡಾಗಲು ಕಾರಣವಾಗಿದೆ, ಮಹಿಳೆಯರಿಗೆ ಸೂಕ್ತ ಸುರಕ್ಷತಾ ವ್ಯವಸ್ಥೆ ಇಲ್ಲ ಇನ್ನಾದರೂ ಸಂಸ್ಥೆಯ ಉನ್ನತ ಮಟ್ಟದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗುತ್ತಿಗೆ ಕಾರ್ಮಿಕರು ಅಗ್ರಹಿಸುತ್ತಾರೆ.

ಎಂಅರ್‌ಪಿಎಲ್ ಸಂಸ್ಥೆಯಲ್ಲಿ ಅರೋಗ್ಯ ಕೇಂದ್ರ ಇದ್ದು ಅದು ಲೆಕ್ಕಕ್ಕೆ ಇಲ್ಲದ ಅರೋಗ್ಯ ಕೇಂದ್ರವಾಗಿದೆ ಹೊರಗಡೆ ಅನೇಕ ಅಸ್ಪತ್ರೆಗಳಿಗೆ ಸಂಸ್ಥೆಯು ಕೋಟಿಗಟ್ಟಲೆ ಹಣ ವ್ಯಯಿಸಿ ಅಸ್ಪತ್ರೆಯನ್ನು ಹೈಟೆಕ್ ಅಸ್ಪತ್ರೆಯಾಗಿ ಮಾರ್ಪಡಿಸಿದೆ ಆದರೆ ಸಂಸ್ಥೆಯ ಒಳಗಡೆ ಇರುವ ಅರೋಗ್ಯ ಕೇಂದ್ರದಲ್ಲಿ ಸರಿಯಾದ ಸಲಕರಣೆಗಳು ಇಲ್ಲ ಅಂಬ್ಯುಲೆನ್ಸ್‌ನಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಸರಿಯಾದ ವ್ಯವಸ್ಥೆ ಇದ್ದಿದ್ದರೆ ಅದೆಷ್ಟು ಜೀವವನ್ನು ಕಾಪಾಡಬಹುದು ಎನ್ನುತ್ತಾರೆ ಕೂಲಿ ಕಾರ್ಮಿಕರು.

ಮನಪಾ ಮಾಜಿ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಸರಿತಾ ಶಶಿಧರ್, ಎಂಅರ್‌ಪಿಎಲ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ್ಷ ಶರತ್ ಜೋಗಿ, ಪ್ರಧಾನ ಕಾರ್ಯದರ್ಶಿ ಸಾಯಿಪೃಥ್ವಿ, ಕರ್ಮಚಾರಿ ಸಂಘದ ಅಧ್ಯಕ್ಷ ಪ್ರಸಾದ್ ಅಂಚನ್, ಪ್ರಧಾನ ಕಾರ್ಯದರ್ಶಿ ಸುರೇಂದ್ರ ಭಟ್ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article