
ಗಣೇಶಪುರ ಜನತಾ ಕಾಲನಿ ಮಂಗಳೂರು ನಡುವೆ ಸಂಚರಿಸುವ ಸರಕಾರಿ ನರ್ಮ್ ಬಸ್ಸಿಗೆ ಶಾಸಕ ಭರತ್ ಶೆಟ್ಟಿ ಚಾಲನೆ
Monday, July 14, 2025
ಮಂಗಳೂರು: ಗಣೇಶಪುರ ಜನತಾ ಕಾಲನಿ ಮಂಗಳೂರು ನಡುವೆ ಸಂಚರಿಸುತ್ತಿದ್ದ 45ಟಿ ನಂಬ್ರದ ಸರಕಾರಿ ನರ್ಮ್ ಬಸ್ಸು ಕಳೆದೆರಡು ವರ್ಷದಿಂದ ಸ್ಥಗಿತಗೊಂಡಿದ್ದು, ಸಾರ್ವಜನಿಕರ ಮನವಿಯ ಮೇರೆಗೆ ಮಂಗಳೂರು ನಗರ ಉತ್ತರದ ಶಾಸಕರ ಸತತ ಪ್ರಯತ್ನದ ಫಲವಾಗಿ ದುರ್ಗಾಪರಮೇಶ್ವರಿ ಆದಿಶಕ್ತಿ ದೇವಸ್ಥಾನ 3ನೇ ಬ್ಲಾಕ್ ಕಾಟಿಪಳ್ಳ ಬಸ್ಸು ತಂಗುದಾಣ ಬಳಿ ಪುನರಾರಂಭಗೊಂಡ ಬಸ್ಸಿಗೆ ಡಾ. ವೈ. ಭರತ್ ಶೆಟ್ಟಿ ಚಾಲನೆ ನೀಡಿದರು.
ನಿಕಟ ಪೂರ್ವ ಮನಪಾ ಸದಸ್ಯರಾದ ಲೋಕೇಶ್ ಬೊಳ್ಳಾಜೆ, ಸರಿತಾ ಶಶಿಧರ್, ಬಿಜೆಪಿ ಮಹಾ ಶಕ್ತಿಕೇಂದ್ರ ಅಧ್ಯಕ್ಷ ದಿನಕರ್ ಇಡ್ಯಾ, ಭಾಜಪ ಪ್ರಮುಖರಾದ ಗುಣಶೇಖರ್ ಶೆಟ್ಟಿ, ಅಶೋಕ್ ಶೆಟ್ಟಿ, ಹರೀಶ್ ಪಣಂಬೂರು, ಶೈಲಜಾ ಗಣೇಶ್ ಕಟ್ಟೆ ಸಪ್ನ ಸುನೀಲ್, ಶಾಂತ ಕುಮಾರ್, ಶಶಿಧರ್ ಕಟ್ಲ, ಹೊನ್ನಯ್ಯ ಕೋಟ್ಯಾನ್, ಬಾಬುಚಂದ್ರ, ಸಂತೋಷ್ ಕುಮಾರ್, ಕೆಸ್‌ಆರ್‌ಟಿಸಿ ಡಿಪ್ಪೋ ಮ್ಯಾನೇಜರ್ ಮಂಜುನಾಥ್, ಕಾಟಿಪಳ್ಳ 3ನೇ ವಾರ್ಡಿನ ಮತ್ತು ಇಡ್ಯಾ ಪೂರ್ವ 6ನೇ ವಾರ್ಡಿನ ಎಲ್ಲಾ ಅನನ್ಯ ಜವಾಬ್ದಾರಿಯುತ ಪದಾಧಿಕಾರಿಗಳು, ಸದಸ್ಯರು ಹಾಗೂ ಕಾರ್ಯಕರ್ತರು, ಸ್ಥಳೀಯ ನಾಗರಿಕರು ಭಾಗವಹಿಸಿದರು.