
ಪಂಚ ಗ್ಯಾರಂಟಿಯ ಶಕ್ತಿ ಯೋಜನೆಗೆ 2 ವರ್ಷ, 500 ಕೋಟಿ ಪ್ರಯಾಣ ಮಾಡಿದ ಫಲಾನುಭವಿಗಳು, ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಲ್ಲಿ ಸಂಭ್ರಮಾಚರಣೆ
Monday, July 14, 2025
ಮಂಗಳೂರು: ನಮ್ಮ ರಾಜ್ಯದಲ್ಲಿ 2 ವರ್ಷಗಳ ಹಿಂದೆ ಪ್ರಾರಂಭಗೊಂಡ ಶಕ್ತಿಯೋಜನೆ ಸುಮಾರು 500 ಕೋಟಿ ಜನರು ಪ್ರಯಾಣವನ್ನು ಮಾಡುವ ಮೂಲಕ ಈ ಒಂದು ಯೋಜನೆ ಅತ್ಯಂತ ಯಶಸ್ವಿಯಾಗಿ ಮೂಡಿ ಬಂದಿದ್ದು, ಸುಮಾರು 12,500 ಕೋಟಿ ರೂ. ಸರಕಾರ ಇವತ್ತು ಯೋಜನೆಗೆ ವಿನಿಯೋಗಿಸಿದೆ. ಹಾಗೂ ಕೆಎಸ್‌ಆರ್‌ಟಿಸಿಗೆ ಪಾವತಿ ಮಾಡಿದೆ.
ಅತ್ಯಂತ ಯಶಸ್ವಿ ಯೋಜನೆಯಾಗಿ ಮಹಿಳೆಯರಿಗೆ ಸ್ವಾವಲಂಬಿಯಾಗಿ ಶಕ್ತಿ ತುಂಬಿದ ಯೋಜನೆ ನಮ್ಮ ರಾಜ್ಯ ಸರ್ಕಾರ ಜಾರಿಗೆ ತಂದು ಪಂಚ ಗ್ಯಾರಂಟಿಯ ಮೂಲಕ ಯೋಜನೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದೆ. ಇದರ ಬಗ್ಗೆ ಮಂಗಳೂರು ಕೆಎಸ್‌ಆರ್‌ಟಿಸಿ ಡಿವಿಜನಲ್ ಕಂಟ್ರೋಲರ್ ಆಫೀಸಿನಲ್ಲಿ ಬಸ್‌ಗಳಿಗೆ ಪೂಜೆ ಮಾಡುವ ಮೂಲಕ ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಅವರು ಚಾಲನೆ ನೀಡಿದರು.
ಮಹಿಳೆಯರಿಗೆ ಇದು ಸ್ವಾವಲಂಬಿ ಯೋಜನೆ ಮತ್ತು ಯಾವುದೇ ಮೊತ್ತವನ್ನು ಪಾವತಿಸದೇ ಪ್ರಯಾಣ ಮಾಡತಕ್ಕಂತಹ ವ್ಯವಸ್ಥೆ ಜಾರಿಗೆ ತರುವ ಮೂಲಕ ಮತ್ತು ಹೆಚ್ಚು ಮಹಿಳೆಯರು ಸ್ವಾವಲಂಬಿಗಳಾಗಿ ದೇವಸ್ಥಾನ ಪ್ರವಾಸಕ್ಕೆ ಹಾಗೂ ರಾಜ್ಯದ ವಿವಿಧ ಭಾಗಗಳ ಪ್ರವಾಸಕ್ಕೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಹೆಚ್ಚು ಸಾಧ್ಯತೆಯನ್ನು ಮಾಡಿದೆ. ಈ ಪಂಚ ಗ್ಯಾಂರಂಟಿಗಳು ಇಂದು ಕರ್ನಾಟಕ ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿದ್ದು, ಕರ್ನಾಟಕ ಸರಕಾರ ದೇಶದಲ್ಲಿಯೇ ಮೇಲ್ಪಂಕ್ತಿಯನ್ನು ಹಾಕಿಕೊಂಡಿದೆ. ಯಾವುದೇ ಯೋಜನೆಯಲ್ಲಿ ಯಶಸ್ವಿಯಾಗಿ ಜಾರಿಗೊಳಿಸುವುದು ಸರಕಾರದ ಕರ್ತವ್ಯವಾಗಿದ್ದು, ಐದು ಯೋಜನೆಯು ತುಂಬಾ ಯಶಸ್ವಿಯಾಗಿ ನಿರ್ವಹಣೆ ಮಾಡಿರುವುದು ಎಂದು ಐವನ್ ಡಿ’ಸೋಜಾ ತಿಳಿಸಿದರು.
ಈ ಸಂದರ್ಭದಲ್ಲಿ ಮಹಿಳಾ ಕಾಂಗ್ರೆಸ್ ವತಿಯಿಂದ ಸಿಹಿ ಹಂಚಿದರು.
ಈ ಸಂದರ್ಭದಲ್ಲಿ ಮಾಜಿ ಸಾಸಕ ಜೆ.ಆರ್. ಲೋಬೋ, ಮಾಜಿ ಎಂಎಲ್‌ಸಿ ಹರೀಶ್ ಕುಮಾರ್, ಕೆಪಿಸಿಸಿ ಉಪಾಧ್ಯಕ್ಷ ಪದ್ಮರಾಜ್ ಆರ್., ಕೆಎಸ್‌ಆರ್‌ಟಿಸಿ ಡಿ.ಸಿ. ರಾಜೇಶ್, ಕಾರ್ಪೋರೇಟರ್‌ಗಳಾದ ಶಶಿಧರ್ ಹೆಗ್ಡೆ, ನವೀನ್ ಡಿ’ಸೋಜಾ, ಶಾಲೆಟ್ ಪಿಂಟೋ, ಮೀನಾ ಟೆಲ್ಲಿಸ್, ಆಲ್ವಿನ್ ಡಿ’ಕುನಹ್ಹ ಸತೀಶ್ ಪೆಂಗಲ್, ಯೋಗಿಶ್ ನಾಯ್ಕ್, ನವಾಜ್, ನೀತು, ವಿದ್ಯಾ, ರಿತೇಶ್, ಶಾಂತಲಾ ಗಟ್ಟಿ, ಪ್ರಶಾಂತ್, ಚಂದ್ರಹಾಸ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.