
ಎಂಆರ್‌ಪಿಎಲ್ ಘಟಕದಲ್ಲಿ ವಿಷಾನಿಲ ಸೋರಿಕೆ: ಫ್ಯಾಕ್ಟರಿ ಮೆನೇಜರ್ ಸಹಿತ ಆರು ಮಂದಿ ವಿರುದ್ಧ ಕೇಸು ದಾಖಲು
ಮಂಗಳೂರು: ಎಂಆರ್‌ಪಿಎಲ್ ಘಟಕದಲ್ಲಿ ವಿಷಾನಿಲ ಸೋರಿಕೆ ದುರಂತದಲ್ಲಿ ಇಬ್ಬರು ಸಾವಿಗೀಡಾಗಿ ಓರ್ವ ಗಂಭೀರ ಅಸ್ವಸ್ಥಗೊಂಡ ಘಟನೆಗೆ ಸಂಬಂಧಿಸಿ ಫ್ಯಾಕ್ಟರಿ ಮೆನೇಜರ್ ಸಹಿತ ಆರು ಮಂದಿ ವಿರುದ್ಧ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಘಟಕದ ಕಾರ್ಯಾಚರಣೆ ವೇಳೆ ಶನಿವಾರ ವಿಷಾನಿಲ ಸೋರಿಕೆ ಸಂದರ್ಭ ಉತ್ತರ ಪ್ರದೇಶದ ದೀಪ್‌ಚಂದ್ರ ಭಾರತೀಯ ಮತ್ತು ಕೇರಳದ ಬಿಜಿಲ್ ಪ್ರಸಾದ್ ಮೃತ ಪಟ್ಟಿದ್ದರು. ಇವರನ್ನು ರಕ್ಷಿಸಲು ಮುಂದಾದ ಉತ್ತರ ಕರ್ನಾಟಕ ಮೂಲದ ವಿನಾಯಕ್ ಎಂಬವರು ಗಂಭೀರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಇವರನ್ನು ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವೇಳೆ ಅದರಲ್ಲಿದ್ದ ದಮಾನಂದ ಸಕಲೇಶಪುರ ಎಂಬವರೂ ತುಸು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಈ ಘಟನೆಗೆ ಸಂಬಂಧಿಸಿ ಮೃತ ದೀಪ್‌ಚಂದ್ರ ಭಾರತೀಯನ ಪತ್ನಿ ಅನಿತಾ ಎಂಬಾಕೆ ಪೊಲೀಸರಿಗೆ ದೂರು ನೀಡಿದ್ದಾರೆ.
ಈ ದೂರಿನಲ್ಲಿ ನನ್ನ ಪತಿ ಹಾಗೂ ಇನ್ನೋರ್ವರ ಸಾವಿಗೆ ಫ್ಯಾಕ್ಟರಿಯ ಮೆನೇಜರ್ ಹಾಗೂ ಎಂಆರ್‌ಪಿಎಲ್ ಒಎಂಎಸ್ ವಿಭಾಗದ ಜಿಸಿಎಂ, ಜಿಎಂ, ಸಿಎಂ, ಎಸ್‌ಐಸಿ ಹಾಗೂ ಪಿಎಸ್ ಹೊಣೆಗಾರರು ಎಂದು ತಿಳಿಸಿದ್ದಾರೆ.