ಸೈಬರ್‌ ಕ್ರೈಂ ಪೊಲೀಸರ ಹೆಸರಲ್ಲಿ ಬೆದರಿಸಿ ಹಣ ವಸೂಲಿ: ಬಂಧನ

ಸೈಬರ್‌ ಕ್ರೈಂ ಪೊಲೀಸರ ಹೆಸರಲ್ಲಿ ಬೆದರಿಸಿ ಹಣ ವಸೂಲಿ: ಬಂಧನ


ಮಂಗಳೂರು: ಸೈಬರ್‌ ಕ್ರೈಂ ಪೊಲೀಸರ ಹೆಸರಲ್ಲಿ ಬೆದರಿಸಿ ಹಣ ವಸೂಲಿ ಮಾಡುತ್ತಿದ್ದ ತುಮಕೂರಿನ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ತುಮಕೂರಿನ ಕೋತಿತೋಪು ನಿವಾಸಿ ಅರುಣ್(27) ಬಂಧಿತ ಆರೋಪಿ.

ಆರೋಪಿಯು ಪೇಸ್ ಬುಕ್ ಖಾತೆ, ಕನ್ನಡ ಮಾಡೆಲ್ಸ್ , ಟ್ರೋಲ್ ಮಾಸ್ಟರ್, ಟ್ರೋಲ್ ಬಸ್ಯಾ ಇತ್ಯಾದಿ ಪೇಜ್‌ಗಳಲ್ಲಿ ಕಮೆಂಟ್ಸ್ ಹಾಕಿರುವ ವ್ಯಕ್ತಿಗಳಿಗೆ ಕರೆಮಾಡಿ ಸೈಬರ್ ಕ್ರೈಂ ಪೊಲೀಸ್ ಬೆಂಗಳೂರು ಸುಶೀಲ್ ಕುಮಾರ ಎಂದು ತನ್ನನ್ನು ಪರಿಚಯಿಸಿಕೊಂಡು ಕರೆ ಮಾಡುತ್ತಿದ್ದ. ಈ ವೇಳೆ, ನಿಮ್ಮ ಮೇಲೆ ದೂರುಗಳು ಬಂದಿದೆ, ನಿಮ್ಮನ್ನು ಅರೆಸ್ಟ್‌ ಮಾಡುತ್ತೇನೆ ಎಂದು ಹೆದರಿಸಿ ಸಾರ್ವಜನಿಕರಿಂದ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ. ಅದರಂತೆ ಪಿರ್ಯಾದಿಗೆ ಹೆದರಿಸಿ ಒಟ್ಟು 1,23,000 ರೂ. ಮೊತ್ತವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದನು. ಈ ಬಗ್ಗೆ ಆರೋಪಿ ಮೇಲೆ ಮಂಗಳವಾರ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಠಾಣಾ ಅಪರಾಧ ಕ್ರಮಾಂಕ: 37/2025 ಕಲಂ. 66 (ಸಿ) 66 (ಡಿ) ಐಟಿ ಕಾಯ್ದೆ ಹಾಗೂ ಕಲಂ 112,308(2), 318(4) ಭಾರತೀಯ ನ್ಯಾಯ ಸಂಹಿತೆಯಂತೆ ಪ್ರಕರಣ ದಾಖಲಾಗಿತ್ತು.

ಆರೋಪಿಯ ಮೇಲೆ ಸೈಬರ್ ಪೊರ್ಟಲ್‌ನಲ್ಲಿ ಒಟ್ಟು 11 ದೂರುಗಳು ದಾಖಲಾಗಿದೆ. ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ಮಾಹಿತಿ ಕಲೆ ಹಾಕಿ ಆರೋಪಿತನನ್ನು ತುಮಕೂರಿನಲ್ಲಿ ಬಂಧಿಸಿ ಬುಧವಾರ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article