
ಕರಾವಳಿಯಲ್ಲಿ ನಿರಂತರ ಸಾಧಾರಣ ಮಳೆ-ಆರೆಂಜ್ ಅಲರ್ಟ್ ಘೋಷಣೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ನಿರಂತರವಾಗಿ ಸಾಧಾರಣ ಮಳೆ ಸುರಿದಿದೆ. ಬೆಳಗ್ಗೆಯಿಂದಲ್ಲೂ ಸಂಜೆ ತನಕನೂ ಮಳೆ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ 22 ಮಿ.ಮೀ ಮಳೆ ದಾಖಲಾಗಿದೆ. ಬುಧವಾರ ದ.ಕ ಜಿಲ್ಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದೆ.
ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯ ಸೂಚಿಸಿದಂತೆ ಕರಾವಳಿ ಭಾಗದಲ್ಲಿ ಮುಂದಿನ ಹಲವು ದಿನ ಸಾಧಾರಣಕ್ಕಿಂತ ಉತ್ತಮ ಮಳೆ ಸಾಧ್ಯತೆ ಇದೆ. ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಹಾಗೂ ಜಿಲ್ಲಾ ಕೇಂದ್ರ ಬಾಗದಲ್ಲಿ ವರ್ಷಧಾರೆಯಲ್ಲಿ ಏರಿಕೆ ಕಾಣಿಸಿಕೊಂಡಿದೆ. 11 ಮನೆಗಳಿಗೆ ಭಾಗಶಃ ಹಾನಿಯಾದರೆ 12 ವಿದ್ಯುತ್ ಕಂಬಗಳು ಮುರಿದು ಬಿದ್ದಿದೆ. 11ಕ್ಕೂ ಹೆಚ್ಚು ಟ್ರಾನ್‌ಸ್ಾರ್ಮರ್ ಪೆಟ್ಟಿಗೆಗಳು ಕೆಟ್ಟು ಹೋಗಿದೆ. ಕರಾವಳಿ ತೀರ ಭಾಗಗಳಲ್ಲಿ ಸ್ವಲ್ಪ ಜಾಸ್ತಿ ಇದೆ. ಈಗಿನಂತೆ ಮುಂದಿನ 5 ದಿನಗಳವರೆಗೂ ಮಳೆ ಮುಂದುವರಿಯುವ ಲಕ್ಷಣಗಳಿವೆ. ಈಗಿನಂತೆ ಜುಲೈ 23ರಿಂದ ರಾಜ್ಯದ ಉತ್ತರ ಹಾಗೂ ದಕ್ಷಿಣ ಒಳನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಕಳೆದ 24 ಗಂಟೆಗಳ ಲೆಕ್ಕಚಾರದಲ್ಲಿ ಕಡಬ ಭಾಗದಲ್ಲಿ 29 ಮಿ.ಮೀ ಮಳೆಯಾಗಿದೆ. ಉಳಿದಂತೆ ಬೆಳ್ತಂಗಡಿ 14.9 ಮಿ.ಮೀ, ಬಂಟ್ವಾಳ 25.6 ಮಿ.ಮೀ, ಮಂಗಳೂರು 20.1 ಮಿ.ಮೀ, ಪುತ್ತೂರು 24.2 ಮಿ.ಮೀ, ಸುಳ್ಯ 22.9 ಮಿ.ಮೀ, ಮೂಡುಬಿದಿರೆ 20 ಮಿ.ಮೀ, ಮೂಲ್ಕಿ 17.3 ಮಿ.ಮೀ, ಉಳ್ಳಾಲ 22.7 ಮಿ.ಮೀ ಮಳೆ ಸುರಿದಿದೆ. ಕಡಲು ಪ್ರಕ್ಷುಬ್ದವಾಗಿರುವ ಕಾರಣದಿಂದ ಮುಂದಿನ ನಾಲ್ಕೈದು ದಿನಗಳ ಕಾಲ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಸೂಚಿಸಲಾಗಿದೆ.