ವಾಸ್ತುಶಿಲ್ಪ ಸೃಜನಾತ್ಮಕ, ತಾಂತ್ರಿಕಜ್ಞಾನ ಹಾಗೂ ಕಾರ್ಯಕ್ಷಮತೆಯ ಮಿಶ್ರಣವಾಗಿದೆ: ದೀಪಿಕಾ ಎ.ನಾಯಕ್

ವಾಸ್ತುಶಿಲ್ಪ ಸೃಜನಾತ್ಮಕ, ತಾಂತ್ರಿಕಜ್ಞಾನ ಹಾಗೂ ಕಾರ್ಯಕ್ಷಮತೆಯ ಮಿಶ್ರಣವಾಗಿದೆ: ದೀಪಿಕಾ ಎ.ನಾಯಕ್


ಮಂಗಳೂರು: ವಾಸ್ತುಶಿಲ್ಪ ಎಂಬುದು ಕಲೆ, ವಿಜ್ಞಾನ, ಮತ್ತು ತಂತ್ರಜ್ಞಾನವನ್ನು ಸಂಯೋಜಿಸುವ ವೃತ್ತಿಯಾಗಿದ್ದು ಸೃಜನಾತ್ಮಕ, ತಾಂತ್ರಿಕಜ್ಞಾನ ಹಾಗೂ ಕಾರ್ಯಕ್ಷಮತೆಯ ಮಿಶ್ರಣವಾಗಿದೆ ಎಂದು ಕೀಸ್ಟೋನ್ ಅರ್ಕಿಟೆಕ್ಚರ್‌ನ ದೀಪಿಕಾ ಎ.ನಾಯಕ್ ಹೇಳಿದರು.

ಇಂದು ಎಕ್ಸ್‌ಪರ್ಟ್ ಪದವಿ ಪೂರ್ವ ಕಾಲೇಜು, ಕೊಡಿಯಲ್‌ಬೈಲ್‌ನಲ್ಲಿ ‘ವೃತ್ತಿಯಾಗಿ ವಾಸ್ತುಶಿಲ್ಪ’ ಎಂಬ ವಿಷಯದ ಕುರಿತು ಪ್ರಥಮ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು. 


ವಾಸ್ತುಶಿಲ್ಪ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕೀಸ್ಟೋನ್ ಅರ್ಕಿಟೆಕ್ಚರ್‌ನ ದೀಪಿಕಾ ಎ ನಾಯಕ್ ಹಾಗೂ ಇಂಕ್ ಆರ‍್ಟಿಸ್ಟ್ ಮತ್ತು ವಾಸ್ತುಶಿಲ್ಪಿ ಆರ್. ನಿಶಿತ್ ಉರ್ವಾಲ್ ಭಾಗವಹಿಸಿದ್ದರು.

ವಾಸ್ತುಶಿಲ್ಪದೊಳಗಿನ ವಿವಿಧ ಕ್ಷೇತ್ರಗಳ ಬಗ್ಗೆ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡ ದೀಪಿಕಾ ಎ ನಾಯಕ್ ಅವರು ಈ ಕ್ಷೇತ್ರದ ವಿಶಾಲವ್ಯಾಪ್ತಿಯನ್ನು ಸಂಕ್ಷಿಪ್ತವಾಗಿ ಪರಿಚಯಿಸಿದರು. ಈ ಕ್ಷೇತ್ರದಲ್ಲಿ ಸಿಗುವ ಉದ್ಯೋಗಾವಕಾಶಗಳು, ಲಾಭಗಳು, ನಮಗೆ ಇರಬೇಕಾದ ವಿವಿಧ ಕೌಶಲ್ಯಗಳು ಇದರ ಕುರಿತು ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು.

ಇದೇ ಸಂದರ್ಭದಲ್ಲಿ ಮತ್ತೊರ್ವ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಶ್ರೀ ಆರ್. ನಿಶಿತ್ ಉರ್ವಾಲ್ ಅವರು ಕಲೆ ಮತ್ತು ವಿಜ್ಞಾನ ಎರಡರ ಸಂಯೋಜನೆಯಾಗಿ ವಾಸ್ತುಶಿಲ್ಪ, ಅದರ ಪರಿಕಲ್ಪನೆಗಳನ್ನು, ವಾಸ್ತುಶಿಲ್ಪ ಕ್ಷೇತ್ರ ಆಯ್ಕೆ ಮಾಡಲು ಬೇಕಾದ ವಿದ್ಯಾರ್ಹತೆ, ಪಠ್ಯಕ್ರಮ ಮತ್ತು ಇನ್ನಿತರ ಅಗತ್ಯ ಮಾಹಿತಿಗಳನ್ನು ವಿವರಿಸಿದರು. ಅದರ ಸುಸ್ಥಿರ ಅಭ್ಯಾಸ ಕ್ರಮವನ್ನು ಪರಿಚಯಿಸಿದರು. 

ಕಾರ್ಯಕ್ರಮದ ಕೊನೆಯಲ್ಲಿ ವಿದ್ಯಾರ್ಥಿಗಳು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಸಂವಾದ ನಡೆಸಿದರು. ಈ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಗೆ ಎಕ್ಸ್‌ಪರ್ಟ್ ಕೋಚಿಂಗ್ ಕ್ಲಾಸ್‌ನ ಹೆಡ್ 

ಕರುಣಾಕರ ಬಳ್ಕೂರು ಇವರು ಸ್ಮರಣಿಕೆ ನೀಡಿ ಗೌರವಿಸಿದರು. ಇದೇ ಸಂದಂರ್ಭದಲ್ಲಿ ಕಾಲೇಜಿನ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಪ್ರಥಮ ಪಿ.ಯು.ಸಿ. ವಿದ್ಯಾರ್ಥಿನಿಯಾದ ಸ್ಕಂದ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article