
ಮೈತ್ರಿ ಮಲ್ಲಿಗೆ ‘ಮಿಸ್ಸ್ ಬ್ಯೂಟಿಫುಲ್ ಐಸ್’ ಪ್ರಶಸ್ತಿ
Wednesday, July 23, 2025
ಮಂಗಳೂರು: ಹೊಸದಿಲ್ಲಿಯ ಲೀಲಾ ಪ್ಯಾಲೇಸ್‌ನಲ್ಲಿ ಜುಲೈ 12 ರಂದು ಗ್ಲಾಮರ್ ಗುರ್ಗಾಂವ್ ಆಯೋಜಿಸಿದ್ದ ಮಿಸ್ಸ್ ವಲ್ಡ್ ಇಂಟರ್ ನ್ಯಾಷನಲ್ ಸ್ಪರ್ಧೆಯಲ್ಲಿ ಮಂಗಳೂರಿನ ಮೈತ್ರಿ ಮಲ್ಲಿ ಅವರು ‘ಮಿಸ್ಸ್ ಬ್ಯೂಟಿಫುಲ್ ಐಸ್’ ಪ್ರಶಸ್ತಿ ಗೆಲ್ಲುವ ಮೂಲಕ ಕರಾವಳಿ ಮಾತ್ರವಲ್ಲದೆ ಇಡೀ ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಇದು ಕರ್ನಾಟಕ ರಾಜ್ಯ ಗೆದ್ದ ಏಕೈಕ ಪ್ರಶಸ್ತಿಯಾಗಿದೆ. ದುಬೈ, ಆಸ್ಟ್ರೇಲಿಯಾ, ಲಂಡನ್, ಯುಎಸ್‌ಎ ಮುಂತಾದ ಅನೇಕ ದೇಶಗಳ ಸ್ಪರ್ಧಿಗಳು ಇದರಲ್ಲಿ ಭಾಗವಹಿಸಿದ್ದರು. ಮೈತ್ರಿ ಅವರ ವಿಭಾಗದಲ್ಲಿ 200ಕ್ಕೂ ಹೆಚ್ಚು ಸ್ಪರ್ಧಿಗಳಿದ್ದರು.
ಮೈತ್ರಿ ಮಲ್ಲಿ ಅವರು ದಿ. ಬನ್ನಂಪಳ್ಳಿ ಮಧುಕರ್ ಮಲ್ಲಿ ಮತ್ತು ಅಂಜಾರ ಬೀಡು ವಿಜಯಲಕ್ಷ್ಮಿ ಎಂ. ಮಲ್ಲಿ ಅವರ ಪುತ್ರಿ ಹಾಗೂ ಮೋಹಿತ್ ಮಲ್ಲಿಯವರ ಸಹೋದರಿ.
ಎಂಬಿಎ, ಎಂಜಿನಿಯರ್ ಪದವೀಧರರಾಗಿರುವ ಇವರು ಅಟೊಮ್ ಫಿಟ್ನೆಸ್ ಕ್ಲಬ್ ಮಂಗಳೂರಿನ ಸಹ-ಸಂಸ್ಥಾಪಕಿಯೂ ಆಗಿದ್ದಾರೆ.
ಮೈತ್ರಿ ಮಲ್ಲಿ ಅವರು ಈ ಹಿಂದೆಯೂ ಅನೇಕ ಪ್ರಶಸ್ತಿ ಗೆದ್ದಿದ್ದಾರೆ. 2003ರಲ್ಲಿ ಮಿಸ್ ಮ್ಯಾಂಗಲೂರು, ಮತ್ತು 2012ರಲ್ಲಿ ಮಿಸ್ ಬಂಟ್ ವರ್ಲ್ಡ್ ಕಿರೀಟ ಗೆಲ್ಲುವ ಮೂಲಕ ಈ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದರು. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಯೋಗ ಚಾಂಪಿಯನ್ ಕೂಡ ಆಗಿರುವ ಮೈತ್ರಿ ಅವರು ಅತ್ಯುತ್ತಮ ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ.