
ಜುಲೈ 12, 13 ರಂದು ಪಣಪಿಲದಲ್ಲಿ ಮತ್ಸ್ಯ ಮೇಳ
Tuesday, July 8, 2025
ಮೂಡುಬಿದಿರೆ: ಮೀನುಗಾರಿಕೆ ಇಲಾಖೆ ದ.ಕ., ಮೀನುಗಾರಿಕಾ ಮಹಾವಿದ್ಯಾಲಯ ಮಂಗಳೂರು ಹಾಗೂ ಶ್ರೀ ರಾಜ್ ಮತ್ಸ್ಯ ಫಾರ್ಮ್ ಪಣಪಿಲ ಸಹಯೋಗದಲ್ಲಿ ಮೀನು ಕೃಷಿಕರ ದಿನಾಚರಣೆ ಪ್ರಯುಕ್ತ ಮತ್ಸ್ಯ ಮೇಳ-2025 ಮೀನು ಕೃಷಿ ತರಬೇತಿ ಕಾರ್ಯಕ್ರಮ ಜುಲೈ 12 ಹಾಗೂ 13 ರಂದು ನಡೆಯಲಿದೆ.
ಪಣಪಿಲ ಕೊಟ್ಟಾರಿಬೆಟ್ಟುವಿನಲ್ಲಿ ನಡೆಯುವ ಕಾರ್ಯಕ್ರಮ ಮೀನು ಹಿಡಿಯುವುದು ಹಾಗೂ ಮಾರಾಟ, ವಿವಿಧ ತಳಿಯ ಮೀನುಮರಿಗಳ ವಿತರಣೆಯ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ದ.ಕ. ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಸಿದ್ಧಯ್ಯ, ಉಪನಿರ್ದೇಶಕ ದಿಲೀಪ್ ಕುಮಾರ್, ಅಕ್ವಾಟಿಕ್ ಬಯಲಾಜಿ ಪ್ರಾಧ್ಯಾಪಕ ಡಾ. ಶಿವಕುಮಾರ್ ಮಗದ, ಜಲಕೃಷಿ ವಿಭಾಗದ ಸಹ ಪ್ರಾಧ್ಯಾಪಕ ಡಾ. ಹೊನ್ನನಂದ ಬಿ.ಆರ್, ದರೆಗುಡ್ಡೆ ಗ್ರಾ.ಪಂ. ಅಧ್ಯಕ್ಷ ಅಶೋಕ್ ಶೆಟ್ಟಿ ಬೇಲೊಟ್ಟು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಕಾರ್ಯಕ್ರಮದ ಸಂಘಟಕ ರಾಜೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.