ಸಾಯೀ ಮಾನಾ೯ಡ್ ಸೇವಾ ಸಂಘದಿಂದ ಧನ ಸಹಾಯ ಹಸ್ತಾಂತರ

ಸಾಯೀ ಮಾನಾ೯ಡ್ ಸೇವಾ ಸಂಘದಿಂದ ಧನ ಸಹಾಯ ಹಸ್ತಾಂತರ


ಮೂಡುಬಿದಿರೆ: ಸಾಯಿ ಮಾರ್ನಾಡ್ ಸೇವಾ ಸಂಘ (ರಿ.)ಅಮನಬೆಟ್ಟು, ಪಡುಮಾರ್ನಾಡ್ ಇದರ ಸೇವಾ ಸಂಘದ ದ 70ನೇ ಯೋಜನೆಯ ಅಂಗವಾಗಿ ಜುಲೈ ತಿಂಗಳ 1ನೇ ಯೋಜನೆಯನ್ನು ಪಡುಮಾರ್ನಾಡ್ ಗ್ರಾಮದ ಅಮನಬೆಟ್ಟು ದಿ. ರತ್ನವಮ೯ ಜೈನ್ ಅವರ ಉತ್ತರಕ್ರಿಯೆಯ ಖಚಿ೯ಗಾಗಿ ರೂ. 10,000 ಧನ ಸಹಾಯವನ್ನು ಅವರ ಮನೆಯವರಿಗೆ ಭಾನುವಾರ ಹಸ್ತಾಂತರಿಸಲಾಯಿತು.

ಸಂಘದ ಕೆಲಸ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ದಿ.ರತ್ನ ವರ್ಮ ಜೈನ್ ಅವರು  ಕ್ರಿಕೆಟ್ ಪಂದ್ಯಾಟ ನಡೆಯುವ ಸಂಧರ್ಭ ದಲ್ಲಿ ಅನ್ನ ಬೇಯಿಸುವ ಕಾರ್ಯ ಹಾಗೂ 50ನೇ ಸೇವಾ ಯೋಜನೆಯ ಸಮಯದಲ್ಲಿ ಎಲ್ಲರಿಗೂ ಅವರ ಲೆಕ್ಕದಲ್ಲಿ ಪಾನಕ ಮಾಡಿ ಕೊಡುವ ಕೆಲಸ ಹಾಗೂ ಚಿಕ್ಕ ಪುಟ್ಟ ಕೆಲಸ ಕಾರ್ಯ ದಲ್ಲಿ ಭಾಗಿಯಾಗುತ್ತಿದ್ದರು. ಆದರೆ ಅವರ ಅರೋಗ್ಯದ ಸಮಸ್ಯೆಯಿಂದ ಜೂ. 30ರಂದು ಸ್ವರ್ಗಸ್ಥ ರಾಗಿರುತ್ತಾರೆ. ಅವರ ಇಬ್ಬರು ಗಂಡು ಮಕ್ಕಳು ಸೇವಾ ಸಂಘದ ಸಕ್ರಿಯ ಸದಸ್ಯರಾಗಿರುತ್ತಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article