
ಅಭಿವೃದ್ಧಿಗೆ ಪೂರಕ ಸೇವೆ ನಮ್ಮದಾಗಬೇಕು: ಪದ್ಮರಾಜ್ ಪೂಜಾರಿ
ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಾ ಕುಳಾಯಿಗೆ ಸನ್ಮಾನ
ಉಳ್ಳಾಲ: ಕಾಂಗ್ರೆಸ್ ಪಕ್ಷ ಹಲವು ನಾಯಕರಿಗೆ ಮಹತ್ತರ ಜವಾಬ್ದಾರಿ ನೀಡಿದೆ. ಪಕ್ಷದ ಅಭಿವೃದ್ಧಿಗೆ ಪೂರಕವಾಗಿ ಕಾರ್ಯ ನಿರ್ವಹಿಸುವ ಮೂಲಕ ಜವಾಬ್ದಾರಿ ಈಡೇರಿಸಬೇಕು. ಕರಾವಳಿ ಜಿಲ್ಲೆಗಳಲ್ಲಿ ಕಾಂಗ್ರೆಸ್‌ನಲ್ಲಿ ಭಿನ್ನತೆ ಸೃಷ್ಟಿ ಆಗದಂತೆ ನಾವು ನಿಗಾ ಇಡಬೇಕು ಎಂದು ಕಾಂಗ್ರೆಸ್ ಮುಖಂಡ ಪದ್ಮರಾಜ್ ಪೂಜಾರಿ ಹೇಳಿದರು.
ಅವರು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ, ಹಿಂದುಳಿದ ವರ್ಗಗಳ ಘಟಕ ಹಾಗೂ ಮಹಿಳಾ ಸಮಿತಿ ವತಿಯಿಂದ ತೊಕ್ಕೊಟ್ಟು ಬ್ಲಾಕ್ ಕಾಂಗ್ರೆಸ್ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ರಾಜ್ಯ ಸದಸ್ಯರಾಗಿ ನೇಮಕಗೊಂಡಿರುವ ಪ್ರತಿಭಾ ಕುಳಾಯಿ ಅವರಿಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಮುಸ್ತಫಾ ಮಲಾರ್, ದಿನೇಶ್ ರೈ ಮಾತನಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರ ಹಿಂದುಳಿದ ವರ್ಗಗಳ ಆಯೋಗದ ರಾಜ್ಯ ಸದಸ್ಯರಾಗಿ ನೇಮಕಗೊಂಡಿರುವ ಪ್ರತಿಭಾ ಕುಳಾಯಿ ಅವರನ್ನು ಸನ್ಮಾನಿಸಲಾಯಿತು.
ಇದೇ ವೇಳೆ ಗ್ರಾಮ ಪಂಚಾಯತ್ ಸದಸ್ಯರಾಗಿ ಆಯ್ಕೆ ಆಗಿರುವ ಮೊಹಮ್ಮದ್ ಕುಂಞಿ, ಮುಸ್ತಫಾ ಮುನ್ನೂರು ಕಾಂಗ್ರೆಸ್ಸಿನ ವಿವಿಧ ಘಟಕಗಳಿಗೆ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆ ಆಗಿರುವ ಅಶ್ರಫ್ ಕೆಸಿರೋಡ್, ವಿವೇಕಾನಂದ ಎಸ್. ಸನಿಲ್, ಅಶ್ರಫ್ ಉಳ್ಳಾಲ, ಅಮಿತಾ ಅಶ್ವಿನ್, ಪರ್ವೀನ್ ಸಾಜಿದ, ಶಾಲಿನಿ ಶೆಟ್ಟಿ, ತುಳಸಿ ಗಟ್ಟಿ, ಆತಿಕಾ, ಲತಾ ವಿಶ್ವನಾಥ್, ಆಯೇಷಾ, ಕೋಟೆಕಾರ್ ಪ.ಪಂ. ಸದಸ್ಯ ಸಫಿಯಾ, ಮ್ಯಾಥ್ಯೂಸ್ ಡಿಸೋಜ ಅವರನ್ನು ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರತಿಭಾ ಕುಳಾಯಿ ಅವರು, ನಾನು ಈವರೆಗೆ ಯಾವುದೇ ಹುದ್ದೆ ಕೇಳಿ ಪಡೆದಿಲ್ಲ. ನಮಗೆ ಅಭಿವೃದ್ಧಿ ಕೆಲಸ ಮುಖ್ಯ ಆಗಬೇಕು. ಅದಕ್ಕಾಗಿ ಒತ್ತು ಕೊಡುತ್ತೇನೆ ಎಂದು ಭರವಸೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಕುಂಪಲ, ಸುರೇಶ್ ಭಟ್ನಗರ, ರಾಜ್ಯ ವಕ್ಫ್ ಬೋರ್ಡ್ ಸದಸ್ಯ, ರಹ್ಮಾನ್ ಕೋಡಿಜಾಲ್, ರಝಿಯಾ ಇಬ್ರಾಹಿಂ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಯೂಸುಫ್ ಬಾವ, ಪುರುಷೋತ್ತಮ ಶೆಟ್ಟಿ ಪಿಲಾರ್, ದಿನೇಶ್ ಕುಂಪಲ, ಮಹಿಳಾ ಘಟಕದ ಅಧ್ಯಕ್ಷೆ ಚಂದ್ರಿಕಾ ರೈ, ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಉಪಾಧ್ಯಕ್ಷ ಸುರೇಖ ಚಂದ್ರ ಹಾಸ್, ಮನ್ಸೂರ್ ಮಂಚಿಲ, ದೇವಕಿ ಆರ್ ಉಳ್ಳಾಲ, ದೇವಣ್ಣ ಶೆಟ್ಟಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಎ.ಕೆ. ರಹ್ಮಾನ್ ಕೋಡಿಜಾಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.