
ಮೂಡುಬಿದಿರೆ ಜೈನ ಪೇಟೆಯಲ್ಲಿ ಸೋಲಾರ್ ದೀಪ ಅಳವಡಿಕೆ
Wednesday, July 2, 2025
ಮೂಡುಬಿದಿರೆ: ಇನ್ನರ್ ವೀಲ್ ಕ್ಲಬ್ ವತಿಯಿಂದ ಜೈನಪೇಟೆ ಸಾವಿರ ಕಂಬದ ಬಸದಿಯ ಬಳಿ ಸೋಲಾರ್ ಬೀದಿ ದೀಪವನ್ನು ಅಳವಡಿಸಲಾಯಿತು.
ಮೂಡುಬಿದಿರೆ ಜೈನ ಮಠದ ಸ್ವಸ್ತಿ ಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ವ್ಯವಸ್ಥೆಯನ್ನು ಉದ್ಘಾಟಿಸಿದರು.
ಇನ್ನರ್ ವೀಲ್ ಕ್ಲಬ್ ನೂತನ ಅಧ್ಯಕ್ಷೆ ಶ್ವೇತಾ ಜೈನ್, ಕಾರ್ಯದರ್ಶಿ ಅನಿತಾ, ಎಂ.ಸಿ.ಎಸ್. ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ಚೌಟರ ಅರಮನೆಯ ಕುಲದೀಪ್ ಎಂ., ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಪುರಸಭಾ ಸದಸ್ಯೆ ಶ್ವೇತಾ ಪ್ರವೀಣ್, ರೋಟರಿ ಕ್ಲಬ್‌ನ ಪೂರ್ವಾಧ್ಯಕ್ಷ ಡಾ. ಹರೀಶ್ ನಾಯಕ್, ಡಾ. ವಿನಯ್ ಕುಮಾರ್ ಹೆಗ್ಡೆ, ಜಯರಾಜ್ ಕಂಬಳಿ, ಇನ್ನರ್ ವೀಲ್ ಕ್ಲಬ್‌ನ ಸದಸ್ಯರಾದ ಪ್ರಕಾಶಿನಿ ಹೆಗ್ಡೆ, ಸುಜಯ ವೇದ ಕುಮಾರ, ವೀಣಾ, ರೇಷ್ಮಾ, ರಮ್ಯಾ, ಅಪೇಕ್ಷ, ದಿವ್ಯಾ ಹಾಗೂ ಜೈನ್ ಮಿಲನ್‌ನ ಪದಾಧಿಕಾರಿಗಳು ಭಾಗವಹಿಸಿದ್ದರು.