ಪಾಡ್ಯಾರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೌಲಭ್ಯಗಳ ವಿತರಣೆ

ಪಾಡ್ಯಾರು ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಸೌಲಭ್ಯಗಳ ವಿತರಣೆ


ಮೂಡುಬಿದಿರೆ: ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರು ಇಲ್ಲಿ ವಿದ್ಯಾರ್ಥಿಗಳಿಗೆ ದಾನಿಗಳಿಂದ ಒದಗಿಸಲಾದ ಶಾಲಾ ಬ್ಯಾಗ್, ನೋಟ್ ಪುಸ್ತಕ, ಬರವಣಿಗೆ ಸಾಮಗ್ರಿಗಳು, ಊಟದ ಬಟ್ಟಲು, ಸ್ಟೀಲ್ ಲೋಟ ಮತ್ತು ನೀರಿನ ಬಾಟಲ್ ಮುಂತಾದವುಗಳನ್ನು ಸಂದೀಪನಿ ಸಾಧನಾಶ್ರಮದ ಕೇಮಾರು ಶ್ರೀ ಈಶ ವಿಠಲ ದಾಸ ಸ್ವಾಮೀಜಿ ಅವರು ಮಂಗಳವಾರ ವಿತರಿಸಿದರು.

ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ನಾಗೇಶ್ ಎಸ್. ಶಾಲಾ ಅಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷೆ ಲಲಿತ, ನೂತನ ಅಧ್ಯಕ್ಷ ರಮೇಶ್ ಆಚಾರ್ಯ ಉಪಸ್ಥಿತರಿದ್ದರು.


ದಾನಿಗಳಾದ ಧೀರಜ್ ಶೆಣೈ ಸುರೇಂದ್ರ ಕಾಮತ್ ಬೆಂಗಳೂರು, ಗೀತಾ ಉಮೇಶ್ ಕಿಣಿ ಮತ್ತು ಮಕ್ಕಳು ಮಣಿಪಾಲ, ಪ್ರತಿಭಾ ಶೆಣೈ, ಅಶೋಕ್ ಮಲ್ಯ ಮೂಡುಬಿದಿರೆ ಇವರ ಕೊಡುಗೆಯನ್ನು ಸ್ಮರಿಸಲಾಯಿತು.

ಇದೇ ಸಂದರ್ಭದಲ್ಲಿ ಶಾಲೆಗೆ ಬೆಂಗಳೂರಿನ ಧೀರಜ್ ಮತ್ತು ಸುರೇಂದ್ರ ಕಾಮತ್ ನೀಡಿದಂತಹ ಕ್ರೀಡಾ ಸಾಮಗ್ರಿಗಳನ್ನು ಮತ್ತು ಸಿಎ ಬ್ಯಾಂಕ್ ಬೆಳುವಾಯಿ ಇವರು ಒದಗಿಸಿದ ಶುದ್ಧ ಕುಡಿಯುವ ನೀರಿನ ಘಟಕವನ್ನು ಅತಿಥಿಗಳು ಶಾಲೆಗೆ ಹಸ್ತಾಂತರಿಸಿದರು.

ಶಾಲಾ ಮುಖ್ಯ ಶಿಕ್ಷಕ ಪ್ರಸನ್ನ ಶೆಣೈ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸ್ವಯಂಸೇವಕ ಶಿಕ್ಷಕಿ ಪ್ರತಿಭಾ ಮತ್ತು ಮಲ್ಲಿಕಾ ಸಹಕರಿಸಿದರು. ಸಹ ಶಿಕ್ಷಕ ರಾಬರ್ಟ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article