
ನಿವೃತ್ತ ಶಿಕ್ಷಕ ಬಾಬುರಾಯ ಹೆಗ್ಡೆ ನಿಧನ
Sunday, July 13, 2025
ಮೂಡುಬಿದಿರೆ: ನಿವೃತ್ತ ಶಿಕ್ಷಕ, ಬೆಳುವಾಯಿ ಐತಮಜಲು 'ರಾಘವೇಂದ್ರ ಕೃಪಾ' ನಿವಾಸಿ ಬಾಬುರಾಯ ಹೆಗ್ಡೆ(90) ಅನಾರೋಗ್ಯದಿಂದಾಗಿ ಶನಿವಾರ ರಾತ್ರಿ ನಿಧನರಾದರು.
ಅವರು ಬೆಳುವಾಯಿ, ಕೆಸರ್‍ಗದ್ದೆ, ಬಂಗ್ಲೆ, ಉರ್ದು ಪ್ರಾಥಮಿಕ ಶಾಲೆ ಸಹಿತ ವಿವಿಧ ಶಾಲೆಗಳಲ್ಲಿ ಸುಮಾರು ಮೂರು ದಶಕಗಳಿಗು ಹೆಚ್ಚು ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಳಿಕ ನಿವೃತ್ತರಾಗಿದ್ದರು.
ನಿವೃತ್ತಿ ಬಳಿಕ ಎಲ್ಲೈಸಿ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ದ.ಕ. ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಕೋಟೆಬಾಗಿಲು ಇದರ ಅಧ್ಯಕ್ಷರಾಗಿ, ಬೆಳುವಾಯಿ ಮಹಮ್ಮಾಯಿ ದೇವಸ್ಥಾನ ಸೇವಾ ಸಮಿತಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯನ್ನು ಅಗಲಿದ್ದಾರೆ.