
ಸಂಪಾಜೆ ವಲಯ ಕಾಂಗ್ರೆಸ್ ಪ್ರಮುಖರ ಸಭೆ
ಸುಳ್ಯ: ಸಂಪಾಜೆಯ ವಲಯ ಕಾಂಗ್ರೆಸ್ ಪ್ರಮುಖರ ಸಭೆ ಕಲ್ಲುಗುಂಡಿಯಲ್ಲಿ ನಡೆಯಿತು.
ಗ್ರಾಮದಲ್ಲಿ ಸ್ಥಗಿತವಾಗಿರುವ ಫ್ಲಾಟಿಂಗ್, 9/11, ಕನ್ವರ್ಷನ್, 94 ಸಿ ಸಮಸ್ಯೆಗಳ ಪರಿಹಾರಕ್ಕಾಗಿ ವಲಯ ಕಾಂಗ್ರೆಸ್ ವತಿಯಿಂದ, ಸಚಿವರು ಶಾಸಕರು, ತಹಶಿಲ್ದಾರ್ ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಪ್ರಯತ್ನ ನಡೆಸುವುದು ಎಂದು ತೀರ್ಮಾನಿಸಲಾಯಿತು.
ಸುಳ್ಯ ತಾಲೂಕು ಅಕ್ರಮ ಸಕ್ರಮ ಸಮಿತಿ ಸಭೆ ನಡೆಯದ ಬಗ್ಗೆ ಅಕ್ರಮ ಸಕ್ರಮ ಮಂಜೂರಾಗದ ಬಗ್ಗೆ ಚರ್ಚೆ ನಡೆಸಲಾಯಿತು. ಪಕ್ಷ ಸಂಘಟನೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಣಯಿಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ವಲಯ ಕಾಂಗ್ರೆಸ್ ಕಾರ್ಯಧ್ಯಕ್ಷ ಜಾನಿ ಕೆ.ಪಿ. ವಹಿಸಿದ್ದರು.
ಜಿಲ್ಲಾ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಮಹಮ್ಮದ್ ಕುಂಞಿ ಗೂನಡ್ಕ, ಜಿಲ್ಲಾ ಕಾಂಗ್ರೆಸ್ ಪ್ರಮುಖರಾದ ಎ.ಕೆ. ಇಬ್ರಾಹಿಂ, ವಲಯ ಕಾಂಗ್ರೆಸ್ ಉಪಾಧ್ಯಕ್ಷ ವಸಂತ ಪೆಲ್ತಡ್ಕ, ಪ್ರಧಾನ ಕಾರ್ಯದರ್ಶಿ ಲೂಕಾಸ್ ಟಿ.ಐ., ಕೋಶಾಧಿಕಾರಿ ರಹೀಂ ಬೀಜದ ಕಟ್ಟೆ, ಅಲ್ಪಸಂಖ್ಯಾತ ಕಾಂಗ್ರೆಸ್ ಅಧ್ಯಕ್ಷರಾದ ಎ.ಕೆ. ಹನೀಫ್, ಕೃಷಿ ಪತ್ತಿನ ಸಹಕಾರಿ ಸಂಘದ ಸದಸ್ಯರಾದ ರಾಜು ಜ್ಞಾನಶೀಲನ್, ಪ್ರಮಿಳ ಪೆಲ್ತಡ್ಕ, ಹಿರಿಯ ನಾಯಕರಾದ ಬೆಂಜಮಿನ್ ಡಿಸೋಜ, ತಾಜ್ ಮಹಮ್ಮದ್, ಉಮ್ಮರ್ ಪಿ.ಎ., ಡೊಮಿನಿಕ್, ಸೆಬಾಸ್ಟಿಯನ್ ನೆಲ್ಲಿಕುಮೇರಿ, ಹಮೀದ್ ಹೆಚ್., ಶ್ರೀಧರ ಕೆ.ಕೆ. ನಾಗಮುತ್ತು ನೆಲ್ಲಿಕುಮೇರಿ ಮತ್ತಿರರು ಉಪಸ್ಥಿತರಿದ್ದರು.
ಲೂಕಾಸ್ ಟಿ.ಐ. ಸ್ವಾಗತಿಸಿ, ವಸಂತ ಪೆಲ್ತಡ್ಕ ವಂದಿಸಿದರು.