
ಆ.16 ರಂದು ಆನೆಗುಡ್ಡೆ ದೇವಳದಲ್ಲಿ ಸಿಂಹ ಸಂಕ್ರಮಣ ಆಚರಣೆ
Thursday, August 14, 2025
ಕುಂದಾಪುರ: ಉಡುಪಿ ಶ್ರೀ ಕೃಷ್ಣ ಮಠದ ಪಂಚಾಂಗ ಆಚರಣೆಯಂತೆ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿಯೂ ಕೂಡಾ "ಸಿಂಹ ಸಂಕ್ರಮಣ" (ಸೋಣೆ ಸಂಕ್ರಾಂತಿ) ವು ದಿನಾಂಕ ಆಗಸ್ಟ್ 16 ನೇ ಶನಿವಾರ ಆಚರಿಸಲ್ಪಡುವುದು ಎಂದು ದೇವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೆಲವು ಪಂಚಾಂಗಗಳಲ್ಲಿ ಭಾನುವಾರ ಸಿಂಹ ಸಂಕ್ರಮಣ ಎಂದಿದ್ದು, ಅಂದು ಕೂಡಾ ಹಲವೆಡೆ ಸಂಕ್ರಾಂತಿ ಆಚರಿಸಲಾಗುವುದು. ಭಕ್ತಾಭಿಮಾನಿಗಳಲ್ಲಿನ ಗೊಂದಲ ನಿವಾರಣೆಗಾಗಿ ಈ ಪ್ರಕಟಣೆ ನೀಡಲಾಗಿದೆ.