
ಸೋಮನಾಥೇಶ್ವರ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ಮಹಾಸಭೆ, ಆಟಿಡೊಂಜಿ ದಿನ ಕಾಯ೯ಕ್ರಮ
Thursday, August 14, 2025
ಮೂಡುಬಿದಿರೆ: ತಾಲೂಕಿನ ಪುತ್ತಿಗೆ ಗ್ರಾಮ ಪಂಚಾಯತ್ ನ ಸೋಮನಾಥೇಶ್ವರ ಸಂಜೀವಿನಿ ಗ್ರಾಮ ಮಟ್ಟದ ಒಕ್ಕೂಟದ ವಾರ್ಷಿಕ ಮಹಾಸಭೆ ಹಾಗೂ ಆಟಿಡೊಂಜಿ ದಿನ ಕಾರ್ಯಕ್ರಮ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ನಡೆಯಿತು.
ಮೂಡುಬಿದಿರೆ ಹಾಗೂ ಮುಲ್ಕಿ ತಾಲೂಕಿನ ಎನ್‌ಆರ್‌ಎಲ್‌ನ ಕಾರ್ಯಕ್ರಮ ವ್ಯವಸ್ಥಾಪಕ ನಿಖಿಲ್ ಕೆ ಸಿ ಇವರು ಸಂಜೀವಿನಿ ಕುರಿತು ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅಶೋಕ್ ಅವರು ಲಿಂಗ ಮತ್ತು ಲಿಂಗತ್ವ ಕುರಿತು ಮಾಹಿತಿ ಕಾರ್ಯಗಾರ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಪಂಚಾಯತ್ ಉಪಾಧ್ಯಕ್ಷ ದಯಾನಂದ, ಸದಸ್ಯರಾದ ಸಾರಿಕಾ, ಗ್ರೇಟ್ಟ ಮಸ್ಕರೇನಸ್, ಪ್ರವೀಣ್ ಶೆಟ್ಟಿ, ಚಂದ್ರಶೇಖರ್ ನಾಯ್ಕ್, ಅನ್ಸಿಲ್ಲ ಮೇಟಿಲ್ದ ಕಾರ್ಡೋಜ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಭೀಮ ನಾಯಕ್, ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿಗಳಾದ ವಿದ್ಯಾ, ಹರಿಣಾಕ್ಷಿ, ನಿವೃತ್ತ ಶಿಕ್ಷಕ ಶೀನ್ ನಾಯ್ಕ್, ನರೇಗಾ ಐಇಸಿ ಸಂಯೋಜಕಿ ಅನ್ವಯ, ಒಕ್ಕೂಟದ ಅಧ್ಯಕ್ಷರು, ಎಂಬಿಕೆ ಸುಕೇಶಿನಿ, LCRP ವಿಶಾಲಾಕ್ಷಿ, ಹರಿಣಾಕ್ಷಿ, ಸ್ಥಳೀಯ ಸಂಪನ್ಮೂಲ ವ್ಯಕ್ತಿಗಳಾದ ಸುಮಲತಾ, ಕುಶಾಲ, ಪದಾಧಿಕಾರಿಗಳು, ಪಂಚಾಯತ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.