ಶಾಂತಿ ನೆಲೆಸುವುದು ಶಾಸಕರಿಗೆ ಬೇಕಾಗಿಲ್ಲ: ಕೆ. ಅಶ್ರಫ್

ಶಾಂತಿ ನೆಲೆಸುವುದು ಶಾಸಕರಿಗೆ ಬೇಕಾಗಿಲ್ಲ: ಕೆ. ಅಶ್ರಫ್

ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಇತ್ತೀಚೆಗೆ ಸರಕಾರ ಮತ್ತು ಸರಕಾರೇತರ ಕ್ರಮಗಳಿಂದಾಗಿ ಶಾಂತಿ ನೆಲೆಸುತ್ತಿದ್ದು, ಶಾಸಕ ವೇದವ್ಯಾಸ್ ಕಾಮತ್‌ಗೆ ಇದನ್ನು ಜೀರ್ಣಗೊಳಿಸುವ ತಾಕತ್ತು ಇಲ್ಲದಂತೆ ಕಾಣುತ್ತದೆ. ಇತ್ತೀಚೆಗೆ ಕಾಮತ್ ಅವರು ಸದನದಲ್ಲಿ ಲವ್ ಜಿಹಾದ್ ಮತ್ತು ಗೊ-ಹತ್ಯೆ ವಿಷಯದಿಂದಾಗಿಯೇ ಕರಾವಳಿ ಜಿಲ್ಲೆಯಲ್ಲಿ ಕೋಮು ವಿದ್ವೇಷ ಆಗುತ್ತಿದೆ ಎಂಬಿತ್ಯಾದಿಯಾಗಿ ಮಾತನಾಡಿದ್ದಾರೆ ಎಂದು ದ.ಕ. ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಜಿ ಮೇಯರ್ ಕೆ. ಅಶ್ರಫ್ ತಿಳಿಸಿದ್ದಾರೆ.

ಮೊನ್ನೆ ಜಿಲ್ಲೆಯಲ್ಲಿ ಗೃಹ ಸಚಿವರು ನಡೆಸಿದ ಶಾಂತಿ ಸಭೆಯಲ್ಲಿ ಇದೇ ಮಾತನ್ನು ಹೇಳಿದ್ದರು. ಶಾಸಕ ಪೂಂಜಾ ಕೂಡ ಇದನ್ನೇ ಹೇಳಿದ್ದರು. ಜಿಲ್ಲೆಯಲ್ಲಿ ಗೋ ಹತ್ಯೆ ಮತ್ತು ಲವ್ ಜಿಹಾದ್ ಬಂಡವಾಳದಿಂದಲೇ ಬದುಕುತ್ತಿರುವ ಶಾಸಕದ್ಟಯರು ಇದು ಜನರಿಗೆ ಮರೆತು ಹೋಗುತ್ತದಾ? ಎಂಬ ಭಯದಲ್ಲಿ ಇರುವಂತಿದೆ. ಇತ್ತೀಚೆಗೆ ಸದನದಲ್ಲಿ ಕಾಮತ್ ಕೂಡ ಇದೆ ವಿಷಯದ ಬಗ್ಗೆ ಪ್ರಸ್ತಾಪಿಸಿ ಆಂಟಿ ಕಮ್ಯುನಲ್ ಟಾಸ್ಕ್ ಫೋರ್ಸ್ ಕಾರ್ಯಾಯೋಜನೆಯಲ್ಲಿ ಈ ವಿಷಯವನ್ನು ಕೂಡಾ ಸೇರ್ಪಡೆ ಗೊಳಿಸಬೇಕು ಎಂದು ಅನಾವಶ್ಯಕ ಆಗ್ರಹ ವ್ಯಕ್ತಪಡಿಸಿದ್ದಾರೆ.

ಕಾಮತ್ ಅವರ ಗೋಹತ್ಯೆ ಮತ್ತು ಲವ್ ಜಿಹಾದ್ ವಿಷಯದ ಪೋಸ್ಟ್ ಮಾರ್ಟಮೀಕರಣವನ್ನು ದ್ವೇಷ ಭಾಷಣ ಎಂದು ಪರಿಗಣಿಸಿ ಸರಕಾರ ಕಾಮತ್ ರ ಮೇಲೆ ಕ್ರಮ ಕೈಗೊಳ್ಳಬೇಕು. ಅಥವಾ ಶಾಸಕರು ರೈತರು ಕೃಷಿ ಮಾರುಕಟ್ಟೆಯಲ್ಲಿ ಜಾನುವಾರು ವಿಲೇವಾರಿಯನ್ನು ನಿಷೇಧ ಮಾಡುವ ಕಾನೂನು ಜಾರಿಗೆ ಸದನದಲ್ಲಿ ಆಗ್ರಹಿಸಲಿ. ಶಾಸಕರಿಗೆ ಇತ್ತೀಚೆಗೆ ಬ್ರಹ್ಮಾವರದಲ್ಲಿ ದನದ ರುಂಡ ಪತ್ತೆಯಾದ ಘಟನೆಯನ್ನು ಮರೆತಿರಬೇಕು ಅದನ್ನು ಸದನದಲ್ಲಿ ನೆನಪಿಸಲಿ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article