
ಮಂಗಳೂರು-ವಿಜಯಪುರ ರೈಲು ಖಾಯಂ
Thursday, August 14, 2025
ಮಂಗಳೂರು: ಮಂಗಳೂರಿನಿಂದ ಬಯಲು ಸೀಮೆಯನ್ನು ಸಂಪರ್ಕಿಸುವ ಪ್ರಮುಖ ರೈಲು ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ವಿಶೇಷ ರೈಲನ್ನು ಖಾಯಂಗೊಳಿಸಿ ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ನೈರುತ್ಯ ರೈಲ್ವೆ ವಲಯವು ರೈಲು ಸಂಖ್ಯೆ 07377/78 ವಿಜಯಪುರ-ಮಂಗಳೂರು ಸೆಂಟ್ರಲ್ ಎಕ್ಸ್ಪ್ರೆಸ್ ವಿಶೇಷ ರೈಲನ್ನು ಖಾಯಂಗೊಳಿಸಿ ಓಡಿಸುವ ಬಗ್ಗೆ ಅಧಿಕೃತವಾಗಿ ಪ್ರಕಟನೆಯನ್ನು ಹೊರಡಿಸಿದೆ.
ಇದರ ಅನ್ವಯ ವಿಜಯಪುರದಿಂದ ಸೆ.1 ಹಾಗೂ ಮಂಗಳೂರು ಸೆಂಟ್ರಲಿನಿಂದ ಸೆಪ್ಟೆಂಬರ್ 2ರಿಂದ ಈ ರೈಲು ಖಾಯಂ ರೈಲಾಗಿ ಓಡಲಿದೆ. ಈ ನಿರ್ಧಾರದಿಂದ ಸುಬ್ರಹ್ಮಣ್ಯ, ಧರ್ಮಸ್ಥಳ, ಬಂಟ್ವಾಳ, ಪುತ್ತೂರು ಹಾಗೂ ಇತರ ನಗರಗಳಿಂದ ಹಾಸನ, ಹುಬ್ಬಳ್ಳಿ, ಗದಗ, ವಿಜಯಪುರ ಹಾಗೂ ಇನ್ನಿತರೆ ಕಡೆಗಳಿಗೆ ಹೋಗುವ ಭಕ್ತರು, ವಿದ್ಯಾರ್ಥಿಗಳು ಮತ್ತು ಇತರ ಪ್ರಯಾಣಿಕರಿಗೆ ಬಹಳಷ್ಟು ಪ್ರಯೋಜನವಾಗಲಿದೆ ಎಂದು ರೈಲು ಬಳಕೆದಾರರು ಸಂತಸ ವ್ಯಕ್ತಪಡಿಸಿದ್ದಾರೆ.