ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದಲ್ಲಿ ಸ್ವಾತಂತ್ರ್ಯ ದಿನಾಚರಣೆ
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾಜಿ ಸೈನಿಕ ಕ್ಯಾ. ದೀಪಕ್ ಆಡ್ಯಂತಾಯ ಅವರು ಭಾಗವಹಿಸಿ ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿ, ಸ್ವಾತಂತ್ರ್ಯವು ನಮಗೆ ದೊರಕಿರುವ ಅತ್ಯಂತ ಅಮೂಲ್ಯವಾದ ವರ. ಇದನ್ನು ಕಾಪಾಡಲು ಪ್ರತಿ ನಾಗರಿಕನು ಜವಾಬ್ದಾರಿತನದಿಂದ ನಡೆದುಕೊಳ್ಳಬೇಕು ಎಂದು ಹೇಳಿದರು.
ವಿಶೇಷ ಅತಿಥಿಗಳಾಗಿ ಮೈಟ್ರಿಕ್ಸ್ ಹಾರ್ಡ್‌ವೇರ್‌ಮ ಮಾಲಕ ಪ್ರವೀಣ್ ಆಳ್ವ ಮತ್ತು ಗುರುಪುರದ ಪ್ರಸಿದ್ಧ ಜ್ಯೋತಿಷಿ ಮಂಜುನಾಥ ಪ್ರಸಾದ್ ಭಾಗವಹಿಸಿ, ದೇಶದ ಅಭ್ಯುದಯಕ್ಕಾಗಿ ಮೌಲ್ಯಾಧಾರಿತ ಜೀವನದ ಮಹತ್ವವನ್ನು ವಿವರಿಸಿದರು.
ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದ ಸಹೋದರಿ ಅಂಬಿಕಾ ಮತ್ತು ಸಹೋದರಿ ಜಯಾ ಅವರು ದೇಶಪ್ರೇಮ, ಶಾಂತಿ ಮತ್ತು ಏಕತೆಯ ಸಂದೇಶವನ್ನು ನೀಡಿದರು.
ವಿದ್ಯಾರ್ಥಿಗಳು ಮತ್ತು ಸದಸ್ಯರಿಂದ ರಾಷ್ಟ್ರಗೀತೆ, ದೇಶಭಕ್ತಿ ಗೀತೆಗಳು, ಪ್ರಬಂಧ ಹಾಗೂ ಸಾಂಸ್ಕೃತಿಕ ನೃತ್ಯ ಪ್ರದರ್ಶನಗಳು ಜರುಗಿ, ಸ್ಥಳದಲ್ಲಿ ದೇಶಭಕ್ತಿಯ ಸ್ಫೂರ್ತಿ ತುಂಬಿದ ವಾತಾವರಣ ನಿರ್ಮಾಣವಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸೇವಾ ಸದಸ್ಯರು, ವಿದ್ಯಾರ್ಥಿಗಳು, ಅತಿಥಿಗಳು ಹಾಗೂ ಸ್ಥಳೀಯರು ಭಾಗವಹಿಸಿದ್ದರು.