ಮಾಸ್ತಿಕಟ್ಟೆ ಶಾಲೆಯಲ್ಲಿ 79ನೇ ವಷ೯ದ ಸ್ವಾತಂತ್ರ್ಯೋತ್ಸವ, ಉದ್ಯಮಿಯಿಂದ ಬೆಂಚು, ಡೆಸ್ಕ್ ಕೊಡುಗೆ

ಮಾಸ್ತಿಕಟ್ಟೆ ಶಾಲೆಯಲ್ಲಿ 79ನೇ ವಷ೯ದ ಸ್ವಾತಂತ್ರ್ಯೋತ್ಸವ, ಉದ್ಯಮಿಯಿಂದ ಬೆಂಚು, ಡೆಸ್ಕ್ ಕೊಡುಗೆ


ಮೂಡುಬಿದಿರೆ: 79ನೇ ವಷ೯ದ ಸ್ವಾತಂತ್ರ್ಯೋತ್ಸವದಂಗವಾಗಿ ಪುರಸಭಾ ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಸ್ತಿಕಟ್ಟೆ ಇಲ್ಲಿ ಪುರಸಭೆಯ ಮಾಜಿ ಅಧ್ಯಕ್ಷ ಪ್ರಸಾದ್ ಕುಮಾರ್ ಅವರು ಧ್ವಜರೋಹಣಗೈದರು. 

ಎಸ್.ಡಿ.ಎಂ.ಸಿಯ ಮಾಜಿ ಅಧ್ಯಕ್ಷರಾದ ಪೃಥ್ವೀ ರಾಜ್ ಜೈನ್ ಹಾಗೂ ಸೆಲ್ವಕುಮಾರ್, ಹೊಸಬೆಟ್ಟು ಗ್ರಾ.ಪಂ.ನ ಮಾಜಿ ಸದಸ್ಯ ಅಶೋಕ್, ಮುಖ್ಯೋಪಾಧ್ಯಾಯನಿ ಸೇಸಮ್ಮ ಬಿ., ಎಸ್.ಡಿ.ಎಂ.ಸಿ ಅಧ್ಯಕ್ಷ ಅಶೋಕ ಆಚಾರ್ಯ ಉಪಾಧ್ಯಕ್ಷೆ ಸುಚಿತ್ರಾ ಉಪಸ್ಥಿತರಿದ್ದರು. 


ಈ ಸಂದರ್ಭದಲ್ಲಿ ದೇವಕೀ ಲಕ್ಷ್ಮಿ ಸ್ವಾಮಿಲ್ ನ ಮಾಲಕ ಪ್ರೇಮನಾಥ ಮಾರ್ಲ ಅವರು ಪುರಸಭಾ ಸದಸ್ಯರಾದ ಪ್ರಸಾದ್ ಕುಮಾರ್ ರವರ ವಿನಂತಿಯ ಮೇರೆಗೆ ಸುಮಾರು 1ಲಕ್ಷ ಮೌಲ್ಯ ದ ಬೇಂಚು ಡೆಸ್ಕುಗಳನ್ನು ಕೊಡುಗೆಯಾಗಿ ನೀಡಿದರು.

ಶಿಕ್ಷಕಿ ನಾಗರತ್ನ ಕಾಯ೯ಕ್ರಮ ನಿರೂಪಿಸಿದರು. ಶಿಕ್ಷಕಿ ಸಂಗೀತಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article