ಎಂಸಿಎಸ್ ಸೊಸೈಟಿಯಲ್ಲಿ 79ನೇ ಸ್ವಾತಂತ್ರ್ಯೋತ್ಸವ ಆಚರಣೆ
Friday, August 15, 2025
ಮೂಡುಬಿದಿರೆ: ಮೂಡುಬಿದಿರೆ ಕೋ-ಆಪರೇಟಿವ್ ಸರ್ವಿಸ್ ಸೊಸೈಟಿಯಲ್ಲಿ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್ ಅವರು 79ನೇ ವಷ೯ದ ಸ್ವಾತಂತ್ರ್ಯೋತ್ಸವದ ಧ್ವಜವನ್ನರಳಿಸಿದರು.
ನಂತರ ಮಾತನಾಡಿದ ಅವರು 1857 ರಿಂದ 1947 ರವರೆಗಿನ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಹೋರಾಟಗಾರರನ್ನು ಹಾಗೂ ಹುತಾತ್ಮರನ್ನು ನೆನೆಸಿಕೊಂಡರು. “ಆಪರೇಷನ್ ಸಿಂಧೂರ್” ಮುಖೇನ ಪಾಕಿಸ್ತಾನ ಭಯೋತ್ಪಾದಕರ ವಿರುದ್ಧ ಪ್ರಧಾನ ನರೇಂದ್ರ ಮೋದಿ ತೆಗೆದುಕೊಂಡ ದಿಟ್ಟ ನಿರ್ಧಾರ ಮತ್ತು ಸೈನಿಕರ ಸಾಹಸದ ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು. ಪ್ರಧಾನಿಯ ಈ ವರ್ಷದ ಸ್ವಾತಂತ್ರ್ಯೋತ್ಸದ ವಿಷಯ “ನ್ಯಾಯ ಭಾರತ” ಬಗ್ಗೆ ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಸೊಸೈಟಿಯ ಉಪಾಧ್ಯಕ್ಷ ಎಂ. ಗಣೇಶ್ ನಾಯಕ್, ನಿರ್ದೇಶಕರಾದ ಚಂದ್ರಶೇಖರ ಎಂ, ಜಾರ್ಜ್ ಮೋನಿಸ್, ಮನೋಜ್ ಶೆಟ್ಟಿ, ಸಿ.ಎಚ್. ಅಬ್ದುಲ್ ಗಫೂರ್, ಎಂ ಜ್ಞಾನೇಶ್ವರ ಕಾಳಿಂಗ ಪೈ, ಎಂ ಜಯರಾಮ ಕೋಟ್ಯಾನ್, ಎಂ. ಪದ್ಮನಾಭ, ದಯಾನಂದ ನಾಯ್ಕ, ಮುಖ್ಯಕಾರ್ಯನಿರ್ವಹಣಾಧಿಕಾರಿ ಕೆ. ರಘುವೀರ್ ಕಾಮತ್ ಮತ್ತು ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.