ಸ್ಕೂಟರ್ ಸವಾರ ಅಪ್ರಾಪ್ತ: ಆತನ ತಂದೆಗೆ 27,500 ರೂ. ದಂಡ
Sunday, September 7, 2025
ಬಜಪೆ: ಬಜಪೆ ಪೇಟೆಯಲ್ಲಿ ವಾಹನ ತಪಾಸಣೆ ವೇಳೆ ತ್ರಿಪ್ಪಲ್ ರೈಡ್ ಮಾಡಿಕೊಂಡು ಬಂದ ಸ್ಕೂಟರ್ ಸವಾರ ಅಪ್ರಾಪ್ತ ಎಂಬುದು ಪತ್ತೆಯಾದ ಹಿನ್ನೆಲೆಯಲ್ಲಿ ಆತನ ತಂದೆಗೆ 27,500 ರೂ. ದಂಡ ವಿಧಿಸಲಾಗಿದೆ.
ಆ.25 ರಂದು ಬಜಪೆ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾಗ ತ್ರಿಪ್ಪಲ್ ರೈಡ್‌ನಲ್ಲಿ ಆಗಮಿಸಿದ ಸ್ಕೂಟರ್‌ನ್ನು ನಿಲ್ಲಿಸಿ ದಾಖಲೆ ಪರಿಶೀಲಿಸಿದ್ದರು. ಆಗ ಅಪ್ರಾಪ್ತ ವಯಸ್ಸಿನ ಬಾಲಕ ಸ್ಕೂಟರ್‌ನ್ನು ಚಲಾಯಿಸಿಕೊಂಡು ಬಂದಿದ್ದು, ಹಿಂಬದಿ ಸೀಟಿನಲ್ಲಿ ಇಬ್ಬರು ಸವಾರರು ಇದ್ದರು. ಇವರನ್ನು ವಿಚಾರಿಸಿದಾಗ ಅಪ್ರಾಪ್ತ ವಯಸ್ಸಿನ ಬಾಲಕನಿಗೆ ಸ್ಕೂಟರ್ ಚಲಾಯಿಸಲು ಪೋಷಕರು ವಾಹನ ನೀಡಿರುವುದು ದೃಢಪಟ್ಟಿತ್ತು.
ಈ ಬಗ್ಗೆ ಬಜಪೆ ಪೊಲೀಸರು ಕಲಂ 199 ಎ, 194 ಸಿ, 194 ಡಿ, 130 ಜೊತೆಗೆ 177 ಐಎಮ್‌ವಿ ಕಾಯ್ದೆಯಡಿ ದೋಷರೋಪಣ ಪಟ್ಟಿ ತಯಾರಿಸಿ ಮಂಗಳೂರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣದ ಕುರಿತು ವಿಚಾರಣೆ ನಡೆಸಿದ ನ್ಯಾಯಾಲಯ ಸ್ಕೂಟರ್ ಮಾಲೀಕನಿಗೆ 27,500 ರೂ. ದಂಡ ವಿಧಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.