ಸೆ.22-ಅ.1 ವರೆಗೆ ಪೊಳಲಿಯಲ್ಲಿ ಶರನ್ನವರಾತ್ರಿ ಉತ್ಸವ

ಸೆ.22-ಅ.1 ವರೆಗೆ ಪೊಳಲಿಯಲ್ಲಿ ಶರನ್ನವರಾತ್ರಿ ಉತ್ಸವ


ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಶರನ್ನವರಾತ್ರಿಯು ಸೆ.22 ರಿಂದ ಅ.1 ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯ ಕ್ರಮಗಳೊಂದಿಗೆ ನಡೆಯಲಿದೆ.

ನವರಾತ್ರಿಯ ಪ್ರತೀ ದಿನ ಮಧ್ಯಾಹ್ನ ಭಕ್ತಾದಿಗಳಿಂದ ಹರಕೆಯ ಚಂಡಿಕಾ ಹೋಮ ಅ.1 ರಂದು ಮಹಾನವಮಿ ಪ್ರಯುಕ್ತ ದೇವಳದ ವತಿಯಂದ ಚಂಡಿಕಾಹೋಮವೂ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ನವರಾತ್ರಿ ಪ್ರಯುಕ್ತ ಪ್ರತಿದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ, ಅ.1 ರಂದು ನವರಾತ್ರಿಯ ವೇಷಗಳ ಸಂಭ್ರಮ ನಡೆಯಲಿದೆ. ರಾಜರಾಜೇಶ್ವರೀ ಸನ್ನಿಧಿಯಲ್ಲಿ ನವರಾತ್ರಿ ದಿನದಂದು ರಾತ್ರಿ 7 ಗಂಟೆಗೆ ನಿತ್ಯ ಪೂಜೆ ಹಾಗೂ ರಾತ್ರಿ 8 ಗಂಟೆಗೆ ನವರಾತ್ರಿ ಪೂಜೆ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article