
ಪಿಕ್ ಪಾಕೆಟ್ ಆರೋಪಿಯ ಸೆರೆ
Sunday, September 21, 2025
ಬಂಟ್ವಾಳ: ಬಿ.ಸಿ. ರೋಡಿನ ಬಸ್ ನಿಲ್ದಾಣದಲ್ಲಿ ನಡೆದ ಪಿಕ್ ಪಾಕೆಟ್ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಮಂಗಳೂರಿನಲ್ಲಿ ಭಾನುವಾರ ಬಂಧಿಸಲಾಗಿದೆ.
ಕೇರಳದ ತ್ರಿಶೂರ್ ಜಿಲ್ಲೆಯ ನಜೀರ್ ಪುನ್ನಯ್ಯೂರು ಬಂಧಿತ ಅರೋಪಿಯಾಗಿದ್ದಾನೆ.
ಅಗಸ್ಟ್ 15 ರಂದು ಕುಂದಾಪುರ ನಿವಾಸಿಯಾಗಿರುವ ರಂಗನಾಥ ಬೆಳ್ಳಾಲ ಎಂಬವರು ಕೊಟ್ಟಿಗೆ ಹಾರಕ್ಕೆ ತೆರಳಲೆಂದು ಬಿ.ಸಿ.ರೋಡಿನ ಖಾಸಗಿ ಬಸ್ ನಿಲ್ದಾಣದಲ್ಲಿ ಬಸ್‌ಗಾಗಿ ಕಾಯುತ್ತಿದ್ದ ವೇಳೆ ಇವರ ಕಿಸೆಯಲ್ಲಿದ್ದ 50 ಸಾವಿರ ರೂ.ವಿನ ಎರಡು ನೋಟಿನ ಕಟ್ಟನ್ನು ಕಿಸೆಗೆ ಕೈ ಹಾಕಿ ಆರೋಪಿ ಎಗರಿಸಿದ್ದ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯ ಪತ್ತೆಗಾಗಿ ನಗರ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು.
ತಿಂಗಳ ಬಳಿಕ ಆರೋಪಿಯನ್ನು ನಗರ ಪೊಲೀಸರ ತಂಡ ಮಂಗಳೂರಿನಲ್ಲಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.