ಅಕ್ರಮ ಕೆಂಪುಕಲ್ಲು ಸಾಗಾಟ ಪತ್ತೆ
Tuesday, September 9, 2025
ಬಂಟ್ವಾಳ: ಯಾವುದೇ ಪರವಾನಿಗೆ ಇಲ್ಲದೆ ಮಂಜೇಶ್ವರದಿಂದ ಅಕ್ರಮ ಕೆಂಪು ಕಲ್ಲು ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬಂಟ್ವಾಳ ನಗರ ಪೊಲೀಸರು ಬಿ ಮೂಡ ಗ್ರಾಮದ ಮಯ್ಯರಬೈಲ್ ಎಂಬಲ್ಲಿ ಪತಗತೆಹಚ್ಚಿದ್ದಾರೆ.
ಬಂಟ್ವಾಳ ನಗರ ಪೊಲೀಸ್ ಠಾಣಾ ಪಿಎಸ್ಸೈ ಮತ್ತವರ ಸಿಬ್ಬಂದಿಗಳು ಮಯ್ಯರಬೈಲ್ ಎಂಬಲ್ಲಿ ವಾಹನ ತಪಾಸಣೆಯಲ್ಲಿ ನಿರತರಾಗಿದ್ದಾಗ ಬಿಸಿ ರೋಡು ಕಡೆಯಿಂದ ತುಂಬೆ ಜಂಕ್ಷನ್ ಕಡೆಗೆ ತೆರಳುತ್ತಿದ್ದ ಲಾರಿಯನ್ನು ಅನುಮಾನದಿಂದ ತಡೆದು ವಿಚಾರಿಸಿದಾಗ ಈ ಅಕ್ರಮ ಸಾಗಾಟ ಮಾಡುತ್ತಿದ್ದ ಕೆಂಪು ಕಲ್ಲು ಪತ್ತೆಯಾಗಿದೆ.
ಮಂಜೇಶ್ವರ ಸಮೀಪದ ಬಾಯಾರು-ಧರ್ಮತ್ತಡ್ಕ ಎಂಬಲ್ಲಿಂದ ಕೆಂಪು ಕಲ್ಲು ಕೋರೆಯಿಂದ ಈ ಕೆಂಪು ಕಲ್ಲನ್ನು ತಂದಿರುವುದಾಗಿ ಚಾಲಕ ಇಸ್ಮಾಲಿ ಪೊಲಿಸರಲ್ಲಿ ಒಪ್ಪಿಕೊಂಡಿದ್ದಾನೆನ್ನಲಾಗಿದೆ.
ಲಾರಿ ಸಹಿತ ಕೆಂಪು ಕಲ್ಲನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.