ಎಫ್‌ಪಿಒ ನಿರ್ವಹಣೆ ಮಾಹಿತಿ ಕಾರ್ಯಾಗಾರ

ಎಫ್‌ಪಿಒ ನಿರ್ವಹಣೆ ಮಾಹಿತಿ ಕಾರ್ಯಾಗಾರ


ಬಂಟ್ವಾಳ: ರೈತ ಉತ್ಪಾದಕ ಸಂಸ್ಥೆಗಳು ಕೃಷಿ ಉತ್ಪನ್ನವನ್ನು ಉತ್ತಮ ಧಾರಣೆಯೊಂದಿಗೆ ಮಾರುಕಟ್ಟೆಗೆ ತಲುಪಿಸುವಲ್ಲಿ ರೈತ ಮತ್ತು ಬಳಕೆದಾರರ ನಡುವಿನ ಕೊಂಡಿಯಾಗಬೇಕು ಎಂದು ರಾಜ್ಯ ರೈತ ಉತ್ಪಾದಕ ಸಹಕಾರ ಸಂಘಗಳ ನಿರ್ದೇಶಕ ವೀರಪ್ಪ ಗೌಡ ಕಣ್ಕಲ್ ಹೇಳಿದರು.

ಬಿ.ಸಿ.ರೋಡ್‌ನಲ್ಲಿರುವ ತಾಲೂಕು ಮಟ್ಟದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ರೈತ ಉತ್ಪಾದಕ ಸಂಸ್ಥೆಗಳ ನಿರ್ವಹಣೆ, ಆಡಳಿತ ಮಂಡಳಿ, ಸದಸ್ಯರ ಪಾತ್ರ ಮಾಹಿತಿ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು.

ಮುಂದಿನ ದಿನಗಳಲ್ಲಿ ಎಫ್‌ಪಿಒ ಪ್ರಸ್ತುತತೆ ಬಹಳಷ್ಟಿದೆ. ಸದಸ್ಯರು ಸಂಸ್ಥೆಯ ವ್ಯವಹಾರದಲ್ಲಿ ತೊಡಗಿಕೊಳ್ಳಬೇಕು ಎಂದರು. ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕಿ ವೀಣಾ ಕೆ.ಆರ್. ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.

ಬೊಲ್ಪು ಎಫ್‌ಪಿಒ ಅಧ್ಯಕ್ಷ ರಾಜಾ ಬಂಟ್ವಾಳ್ ಬಳಿಕ ನಡೆದ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಾವಯವ ಕೃಷಿಕ ಸನತ್ ಕುಮಾರ್ ರೈ ಅನಂತಾಡಿ, ತರಕಾರಿ ಕೃಷಿಕ ರಾಮಣ್ಣ ಸಪಲ್ಯ ನಾವೂರ ಅವರನ್ನು ಗೌರವಿಸಲಾಯಿತು.

ನಿರ್ದೇಶಕರಾದ ಜಗನ್ನಾಥ ಚೌಟ ಬದಿಗುಡ್ಡೆ, ಸದಾನಂದ ಡಿ. ಶೆಟ್ಟಿ ರಂಗೋಲಿ, ಅರ್ವಿನ್ ಡಿಸೋಜ, ಸೀತಾರಾಮ ಶೆಟ್ಟಿ ಸಜೀಪ, ಜಗದೀಶ ಭಂಡಾರಿ ಕುರಿಯಾಳ ಉಪಸ್ಥಿತರಿದ್ದರು.

ನಿರ್ದೇಶಕರಾದ ದೇವಪ್ಪ ಕುಲಾಲ್ ಪಂಜಿಕಲ್ ಸ್ವಾಗತಿಸಿ, ವಿಜಯ ರೈ ವಾಮದಪದವು ವಂದಿಸಿದರು. ಸಿಇಒ ಹರ್ಪಿತ್ ಕುಮಾರ್ ವರದಿವಾಚಿಸಿ, ಲೆಕ್ಕಪತ್ರ ಮಂಡಿಸಿದರು. ಕೃಷ್ಣಪ್ಪ ಸಪಲ್ಯ ಅಂತರ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article