ಸೆ.14ರಂದು ರೋಟೋ ಕ್ವಿಝ್ ಸ್ಪರ್ಧೆ
ಮಂಗಳೂರು: ರೋಟರಿ ಕ್ಲಬ್ ಮಂಗಳೂರು ಮತ್ತು ಬೆಂಗಳೂರು ವತಿಯಿಂದ ಸೆ. 14ರಂದು ಮಂಗಳೂರು ವಿಭಾಗದ ರೋಟೋ ಕ್ವಿಝ್ ಸ್ಪರ್ಧೆಯನ್ನು ಆಯೋಜಿಸಲಾಗಿದೆ.
ನಗರದ ಎಸ್‌ಡಿಎಂ ಪಿಜಿ ಸೆಂಟರ್ ಫಾರ್ ಮ್ಯಾನೇಜ್‌ಮೆಂಟ್ ಸ್ಟಡೀಸ್‌ನಲ್ಲಿ ಮಂಗಳೂರು ವಿಭಾಗದ ಸ್ಪರ್ಧೆ ನಡೆಯಲಿದೆ. ಪ್ರಥಮ ತಂಡಕ್ಕೆ 15,000 ರೂ., ದ್ವಿತೀಯ ತಂಡಕ್ಕೆ 10,000 ರೂ., ತೃತೀಯ ತಂಡಕ್ಕೆ 6,000 ರೂ. ಹಾಗೂ ನಾಲ್ಕನೆ ಸ್ಥಾನ ಪಡೆಯುವ ತಂಡಕ್ಕೆ 4,000 ನಗದು ಬಹುಮಾನ ನೀಡಲಾಗುವುದು. ವಿಜೇತ ತಂಡಕ್ಕೆ ನಗದು ಬಹುಮಾನದ ಜತೆಗೆ ವಿಶೇಷವಾಗಿ 16,000 ರೂ. ಮೌಲ್ಯದ ಆನ್‌ಲೈನ್ ಕೋರ್ಸ್ ಸಬ್‌ಸ್ಕ್ರಿಪ್ಷನ್ ದೊರೆಯಲಿದೆ ಎಂದು ಮಂಗಳೂರು ರೋಟರಿ ಕ್ಲಬ್ ಅಧ್ಯಕ್ಷ ವಿನೋದ್ ಅರಾನ್ಹ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆಯ್ಕೆಯಾಗುವ ಎರಡು ತಂಡಗಳು ಬೆಂಗಳೂರಿನಲ್ಲಿ ಸೆ. 22ರಂದು ನಡೆಯಲಿರುವ 66ನೇ ರಾಮನಾರಾಯಣ್ ಚೆಲ್ಲರಾಮ್ ವಾರ್ಷಿಕ ಅಂತರ್ ಕಾಲೇಜು ಕ್ವಿಝ್-ರೋಟೋ ಕ್ವಿಝ್ 2025ರಲ್ಲಿ ಭಾಗವಹಿಸಲಿವೆ. ಇಲ್ಲಿ ವಿಜೇತರಾಗುವ ತಂಡಕ್ಕೆ ಪ್ರಥಮ 30,000 ರೂ., ದ್ವಿತೀಯ 15,000 ರೂ., ತೃತೀಯ 10,000 ರೂ. ಹಾಗೂ ನಾಲ್ಕನೆ ಬಹುಮಾನವಾಗಿ 5,000 ರೂ. ನಗದು ಬಹುಮಾನ ದೊರೆಯಲಿದೆ ಎಂದು ಅವರು ಹೇಳಿದರು.
ರೋಟೋ ಕ್ವಿಝ್ ಮಂಗಳೂರು ವಿಭಾಗದ ಸಂಚಾಲಕ ಬಾಲಚಂದ್ರ ರಾವ್, ಮಂಗಳೂರು ರೋಟರಿ ಕ್ಲಬ್ ಯುವ ಸೇವೆ ನಿರ್ದೇಶಕ ಕಿಶನ್ ಕುಮಾರ್, ಗೌರವ ಕಾರ್ಯದರ್ಶಿ ಡಾ. ಕುನಾಲ್, ಪ್ರಸನ್ನ ಶೆಣೈ ಉಪಸ್ಥಿತರಿದ್ದರು.