ರಸ್ತೆ ಗುಂಡಿಯಿಂದಾಗಿ ಮಹಿಳೆ ದಾರುಣ ಮೃತ್ಯು: ದೂರು ದಾಖಲು
Tuesday, September 9, 2025
ಮಂಗಳೂರು: ಕೂಳೂರು ಬಳಿ ರಸ್ತೆ ಗುಂಡಿಯಿಂದಾಗಿ ನಿನ್ನೆ ಆದ ರಸ್ತೆ ಅಪಘಾತದಲ್ಲಿ ಮಹಿಳೆ ಮೃತ್ಯು ಆಗಿರುವುದಕ್ಕೆ ನ್ಯಾಶನಲ್ ಹೈವೇ ಅಥಾರಿಟಿ ಆಫ್ ಇಂಡಿಯಾ ಕಾರಣ ಎಂದು ಹೇಳಿರುವ ಆಮ್ ಆದ್ಮಿ ಪಕ್ಷ ದಕ್ಷಿಣ ಕನ್ನಡ ಇದರ ಪರವಾಗಿ ರಾಜ್ಯ ಉಪಾಧ್ಯಕ್ಷ ವಿವೇಕಾನಂದ ಸಾಲಿನ್ಸ್ ನೇತೃತ್ವದಲ್ಲಿ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿರುತ್ತಾರೆ.
ಈ ವೇಳೆಯಲ್ಲಿ ಸೀಮಾ ಮಡಿವಾಳ, ಜೇಮ್ಸ್ ಡಿಸೋಜಾ, ಕಬೀರ್ ಕಾಟಿಪಳ್ಳ ಹಾಗೂ ವಾಸುದೇವ ಅವರು ಉಪಸ್ತಿತರಿದ್ದರು.