ಅಕ್ರಮ ಗೋಹತ್ಯೆ: ಖಡಕ್ ಎಸ್ಪಿಯವರು ಈಗ ಎಲ್ಲಿದ್ದಾರೆ? ಹಿ.ಜಾ.ವೇ. ಮುಖಂಡ ನರಸಿಂಹ ಮಾಣಿ ಪ್ರಶ್ನೆ
ಶುಕ್ರವಾರ ಸಂಜೆ ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪೆರ್ನೆಗ್ರಾಮ ಕಡಂಬು ದೇಜಪ್ಪ ಮೂಲ್ಯ ಅವರ ದನದ ಹಟ್ಟಿಯಿಂದ ಗಬ್ಬದ ದನವನ್ನು ಕದ್ದು, ಅವರ ಜಮೀನಿನಲ್ಲಿಯೇ ಅದರ ಹತ್ಯೆಗೈದು ಮಾಂಸಮಾಡಿ ಎಸಗಿರುವ ಹೀನಕೃತ್ಯವನ್ನು ತೀವ್ರವಾಗಿ ಖಂಡಿಸಿದರು.
ಕೆಲ ದಿನಗಳ ಹಿಂದೆ ಇದೇ ಮಾದರಿಯಲ್ಲಿ ಬಿ.ಸಿ.ರೋಡಿಗೆ ಸಮೀಪದ ತುಂಬೆಯಲ್ಲಿ ಕೃತ್ಯ ನಡೆದಿದ್ದು,ಇದೀಗ ಕಡಂಬುವಿನಲ್ಲಿ ಎರಡನೇ ಪ್ರಕರಣ ನಡೆದಿದೆ.ಈ ಎರಡೂ ಪ್ರಕರಣದಲ್ಲಿ ಪೊಲೀಸರು ಆರೋಪಿಗಳನ್ನು ಇದುವರೆಗೂ ಬಂಧಿಸಲಿಲ್ಲ ಎಂದ ಅವರು ಜಿಲ್ಲೆಯಲ್ಲಿ ಶಾಂತಿ ಕದಡುವವರನ್ನು ಹದ್ದುಬಸ್ತಿನಲ್ಲಿಡಲು,ಕೋಮು ಪ್ರಚೋದನೆ ತಡೆಯಲು ಸ್ಥಾಪನೆಯಾಗಿರುವ ‘ಅಂಟಿ ಕಮ್ಯೂನಲ್ ವಿಂಗ್’ ಮತ್ತು ದಕ್ಷ ಅಧಿಕಾರಿ ಎಂದು ಹೇಳಿಕೊಳ್ಳುವ ದ.ಕ. ಜಿಲ್ಲಾ ಎಸ್ಪಿಯವರ ಪೌರುಷ ಈಗ ಎಲ್ಲಿ ಹೋಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದಕ್ಷ ಅಧಿಕಾರಿ ಹೆಸರಿನಲ್ಲಿ ಇತ್ತೀಚೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕುಮಾರ್ ಅವರನ್ನು ತಂದು ಕೂರಿಸಿರುವ ಸರಕಾರ ಹಿಂದೂಗಳು ದೇವರ ಸ್ವರೂಪದಲ್ಲಿ ಕಾಣುವ ಗೋವನ್ನು ನಿರಂತರವಾಗಿ ಅಕ್ರಮ ಗೋಸಾಗಾಟ, ಮಾಂಸ ಮಾರಾಟದಂಧೆ ಅದರಲ್ಲು ಹಟ್ಟಿಯಿಂದಲೇ ಗೋವನ್ನು ಕಳವುಗೈದು ಅವರ ತೋಟದಲ್ಲೇ ಹತ್ಯೆ ಮಾಡಿ ಮಾಂಸ ಮಾರಾಟ ದಂಧೆ ನಡೆಯುತ್ತಿದೆಯೆಂದರೆ ನಮ್ಮ ಪೊಲೀಸ್ ವ್ಯವಸ್ಥೆ ಎಲ್ಲಿಗೆ ತಲುಪಿದೆ. ಈ ದಕ್ಷ ಅಧಿಕಾರಿ ಎಂದೇ ಹೇಳಿಕೊಳ್ಳುವ ಎಸ್ಪಿಯವರು, ಅಂಟಿ ಕಮ್ಯುನಲ್ ವಿಂಗ್ ಈಗ ಎಲ್ಲಿ ಹೋಗಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಕೇವಲ ಹಿಂದೂ ಕಾರ್ಯಕರ್ತರ, ಹಿರಿಯರ,ಪ್ರಮುಖರ ಮನೆಗಳಿಗೆ ಮಧ್ಯರಾತ್ರಿ ತೆರಳಿ ಬಾಗಿಲು ಬಡಿದು ಜಿಪಿಎಸ್ ಪೊಟೋ ತೆಗೆಯವ,ಬೆದರಿಸುವ ಪೊಲೀಸರು ಇದೀಗ ಯಾರ ಭಯವಿಲ್ಲದೆ ರಾಜಾರೋಷವಾಗಿ ಅಕ್ರಮವಾಗಿ
ದನಕಳವು, ಸಾಗಾಟ ಮಾಡಿ ಹತ್ಯೆಗೈಯುವ ದುಷ್ಕರ್ಮಿಗಳ, ಅಕ್ರಮ ಡ್ರಗ್ ಮಾಫಿಯಾದಲ್ಲಿ ತೊಡಗಿರುವವರ ಮನೆ ಬಾಗಿಲು ಯಾಕೆ ಬಡಿಯುತ್ತಿಲ್ಲ ಎಂದು ಪ್ರಶ್ನಸಿದರಲ್ಲದೆ ಇತ್ತೀಚೆಗೆ ಕೃಷ್ಣಾಷ್ಠಮಿ, ಗಣೇಶೋತ್ಸವ ಕಾರ್ಯಕ್ತಮದಲ್ಲು ಪೊಲೀಸರು ಧ್ವನಿವರ್ಧಕ ಸ್ಥಗಿತಗೊಳಿಸಿ, ಯಕ್ಷಗಾನವನ್ನುಅರ್ಧದಲ್ಲೇ ಮೊಟಕುಗೊಳಿಸಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪೊಲೀಸರ ಕ್ರಮವನ್ನು ನರಸಿಂಹ ಮಾಣಿ ಖಂಡಿಸಿದರು.
ಈ ವಿಚಾರದಲ್ಲಿ ಸು.ಕೋ. ಆದೇಶ ಪಾಲಿಸುವುದಿದ್ದರೆ ತಾರತಮ್ಯವಿಲ್ಲದೆ ಸಮಾನವಾಗಿ ಪಾಲಿಸಬೇಕು ಹೊರತು ಕೇವಲ ಹಿಂದೂ ಸಮಾಜದ ಧಾರ್ಮಿಕ ಅಚರಣೆಗೆ ಮಾತ್ರ ತಡೆವೊಡ್ಡುವುದನ್ನು ಸಹಿಸಲು ಸಾಧ್ಯವಿಲ್ಲ ಎಂದ ಅವರು ಹಿಂದೂ ನಾಯಕರು ಪತ್ರಿಕಾಗೋಷ್ಠಿ ನಡೆಸಿದರೆ, ಪ್ರತಿಭಟನೆ, ಭಾಷಣ ಮಾಡಿದರೆ ಸೋಮೊಟೋ ಕೇಸು ದಾಖಲಿಸಲಿಸುವ ಪೊಲೀಸರು ನಿರಂತರ ಗೋಹತ್ಯೆ, ಲವ್ ಜಿಹಾದ್, ಡ್ರಗ್ ಮಾಫಿಯಾ ವಿರುದ್ದವು ಕ್ರಮ ಕೈಗೊಳ್ಳಲು ಜಿಲ್ಲಾ ಎಸ್ಪಿಯವರು ಉತ್ಸಾಹವನ್ನು ತೋರಿಸಲಿ ಎಂದು ಅವರು ಸವಾಲು ಹಾಕಿದ್ದಾರಲ್ಲದೆ ಈ ಸಮಾಜಬಾಹಿರ ಕೃತ್ಯಗಳಿಗೂ ಕಡಿವಾಣ ಹಾಕಿ ತಮ್ಮ ದಕ್ಷತೆ ಮೆರೆಯಿರಿ ಎಂದು ಅವರು ಹೇಳಿದ್ದಾರೆ.
ಗೋವನ್ನು ಕಳೆದು ಕೊಂಡಿರುವ ದೇಜಪ್ಪ ಮೂಲ್ಯರವರ ಕುಟುಂಬ ಕಣ್ಣೀರು ಹಾಕುತ್ತಿದೆಯಲ್ಲದೆ ಸೂತಕದ ಛಾಯೆಯಲ್ಲಿದೆ. ಈ ಕೃತ್ಯದ ಆರೋಪಿಗಳನ್ನು ಈ ಕೂಡಲೇ ಬಂಧಿಸಬೇಕು, ಅವರಿಗೆಬಗರಿಷ್ಠ ಪ್ರಮಾಣದ ಪರಿಹಾರ ನೀಡಬೇಕು ಆರೋಪಿಗಳನ್ನು ಗಡೀಪಾರು ಮಾಡಬೇಕು ಎಂದು ಈ ಸಂದರ್ಭದಲ್ಲಿ ಅವರು ಎಚ್ಚರಿಸಿದ್ದರು.
ಹಿ.ಜಾ.ವೇ.ಪ್ರಮುಖರಾದ ಅನೂಪ್ ಮಯ್ಯ, ಅಕ್ಷಯ ರಜಪೂತ್ ವಿಟ್ಲ ಅವರು ಉಪಸ್ಥಿತರಿದ್ದರು.