ಐವರು ಶಿಕ್ಷಕರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ

ಐವರು ಶಿಕ್ಷಕರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ


ಬಂಟ್ವಾಳ: ದೇಶದ ಭವಿಷ್ಯವನ್ನೇ ಬದಲಿಸುವ ಶಕ್ತಿ ಶಿಕ್ಷಕ ವೃತ್ತಿಗಿದ್ದು, ಮುಂದಿನ ಪೀಳಿಗೆಯನ್ನು ಹೆಚ್ಚು ಶಕ್ತಿಯುತವಾಗಿ ರೂಪಿಸುವ ಹೊಣೆಗಾರಿಕೆಯೂ ಶಿಕ್ಷಕರ ಮೇಲಿದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.

ಮೊಡಂಕಾಪು ಅನುಗ್ರಹ ಸಭಾಂಗಣದಲ್ಲಿ ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ತಾಲೂಕು ಶಿಕ್ಷಕರ ದಿನಾಚರಣಾ ಸಮಿತಿಯ ಸಹಯೋಗದಲ್ಲಿ ಡಾ| ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನೋತ್ಸವದ ನೆನಪಲ್ಲಿ ಶುಕ್ರವಾರ ನಡೆದ ಬಂಟ್ವಾಳ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು

ಒಬ್ಬ ಅತ್ಯುತ್ತಮ ಶಿಕ್ಷಕರಾಗಿದ್ದ ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವನ್ನು ಶಿಕ್ಷಕರ ದಿನವನ್ನಾಗಿ ಸಂಭ್ರಮಿಸುತ್ತಿದ್ದು, ಅವರ ಆದರ್ಶ ಎಲ್ಲರಿಗೂ ಮಾದರಿಯಾಗಬೇಕಿದೆ ಎಂದರು.

ವೇದಿಕೆಯಲ್ಲಿ ಬಂಟ್ವಾಳ ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೊ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ, ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಚಿನ್‌ಕುಮಾರ್,

ವಿಟ್ಲ ಅಧ್ಯಾಪಕರ ಸಹಕಾರ ಸಂಘದ ಅಧ್ಯಕ್ಷ ರಮೇಶ್ ನಾಯಕ್ ರಾಯಿ, ಮೊಡಂಕಾಪು ಇನೆಂಟ್ ಜೀಸಸ್ ಶಿಕ್ಷಣ ಸಂಸ್ಥೆಗಳ ಜತೆ ಕಾರ್ಯದರ್ಶಿ ರೆ|ಫಾ| ವಿಕ್ಟರ್ ಡಿಸೋಜ, ಮುಖ್ಯಶಿಕ್ಷಕ ರೆ|ಫಾ| ಮೆಲ್ವಿನ್ ಲೊಬೊ, ಕ್ಷೇತ್ರ ಸಮನ್ವಯಾಧಿಕಾರಿ ವಿದ್ಯಾಕುಮಾರಿ, ದೈಹಿಕ ಶಿಕ್ಷಣ ಪರಿವೀಕ್ಷಕಿ ಆಶಾ ನಾಯಕ್, ಬಿಇಒ ಕಚೇರಿ ಪತ್ರಾಂಕಿತ ವ್ಯವಸ್ಥಾಪಕಿ ಹರಿಣಾಕ್ಷಿ, ಆಚರಣಾ ಸಮಿತಿ ಅಧ್ಯಕ್ಷ ಜಯರಾಮ, ನೋಡೆಲ್ ಅಧಿಕಾರಿ ಪ್ರತಿಮಾ, ವಿವಿಧ ಶಿಕ್ಷಕರ ಸಂಘಗಳ ಅಧ್ಯಕ್ಷರಾದ ಜೊಯಲ್ ಮೆಂಡೊನ್ಸಾ, ಶಿವಪ್ರಸಾದ್ ರೈ, ಗುರುರಾಜ್, ಕಿರಣ್‌ಕುಮಾರ್, ಲ್ಯಾನ್ಸಿ, ರಾಜೇಂದ್ರ ರೈ, ನವೀನ್ ರೈ, ಮಾಲತಿ, ಗೀತಾ, ಮುರಳಿಕೃಷ್ಣ ರಾವ್ ಮೊದಲಾದವರಿದ್ದರು.

ಸಮಾರಂಭದಲ್ಲಿ ನಾಟಿ ಸರಕಾರಿ ಶಾಲೆಯ ಪ್ರಭಾವತಿ, ಕಲ್ಲಡ್ಕ ಸರಕಾರಿ ಶಾಲೆಯ ಸವಿತಾ ರಾಮಕೃಷ್ಣ ಭಟ್, ಪಂಜಿಕಲ್ಲು ಸರಕಾರಿ ಶಾಲೆಯ ಮ್ಯಾಗ್ನೆಟ್ ಮೆರ್ಲಿನ್ ಡಿಸೋಜ, ಮೊಡಂಕಾಪು ಇನೆಂಟ್ ಜೀಸಸ್ ಶಾಲೆಯ ತೆರೆಸಾ ಎಲ್.ಡಿಮೆಲ್ಲೊ ಹಾಗೂ ತುಂಬೆ ಬಿ.ಎ.ವಿದ್ಯಾಸಂಸ್ಥೆಯ ಜಗದೀಶ್ ರೈ ಹೀಗೆ 5 ಮಂದಿ ಶಿಕ್ಷಕರಿಗೆ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಶಿಕ್ಷಣ ಸಂಯೋಜಕಿ ಸುಧಾ ಅವರು ಶಿಕ್ಷಕರ ವಿವರ ನೀಡಿದರು.

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥನ್ ಎಂ.ಜಿ. ಸ್ವಾಗತಿಸಿದರು. ತಾಲೂಕು ಸರಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್‌ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article