ಭರತನಾಟ್ಯ ಜ್ಯೂ. ಪರೀಕ್ಷೆಯಲ್ಲಿ ತೇರ್ಗಡೆ
Saturday, September 6, 2025
ಪುತ್ತೂರು: ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾನಿಲಯ ನಡೆಸಿದ 2024-25ನೇ ಸಾಲಿನ ಭರತನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಹಿಮನೀಶ್ ಗೌಡ ಕೆ. ಉತ್ತಮ ಅಂಕದೊಂದಿಗೆ ತೇರ್ಗಡೆ ಹೊಂದಿದ್ದಾನೆ.
ಈತ ಪುತ್ತೂರು ಅಂಬಿಕಾ ವಿದ್ಯಾಲಯದ 5ನೇ ತರಗತಿಯ ಕಲಿಯುತ್ತಿದ್ದು, ಮೂಕಾಂಬಿಕಾ ಕಲ್ಚರಲ್ ಅಕಾಡೆಮಿಯ ವಿದ್ಯಾರ್ಥಿಯಾಗಿದ್ದಾನೆ. ನೃತ್ಯಗುರು ವಿದ್ವಾನ್ ದೀಪಕ್ ಕುಮಾರ್, ವಿದ್ವಾನ್ ಗಿರೀಶ್ ಕುಮಾರ್ ಹಾಗೂ ವಿದುಷಿ ಪ್ರೀತಿಕಲಾ ಅವರ ಬಳಿ ನೃತ್ಯಾಭ್ಯಾಸ ಮಾಡುತ್ತಿದ್ದಾನೆ. ಈತ ಬನ್ನೂರು ನಿವಾಸಿ ಪತ್ರಕರ್ತ ಲೋಕೇಶ್ ಬನ್ನೂರು ಮತ್ತು ಜಯಶೀಲ ದಂಪತಿ ಪುತ್ರ.