ಬುರುಡೆ ಪ್ರಕರಣ: ಯೂಟ್ಯೂಬರ್ ಗಳು ವಿಚಾರಣೆಗೆ ಹಾಜರ್
ಬೆಳ್ತಂಗಡಿ: ಬುರುಡೆ ಪ್ರಕರಣದ ತನಿಖೆಗಾಗಿ ಯ್ಯೂಟ್ಯೂಬರ್ ಗಳಾದ ಕೇರಳದ ಮನಾಫ್, ಅಭಿಷೇಕ್, ಜಯಂತ್.ಟಿ, ಗಿರೀಶ್ ಮಟ್ಟಣ್ಣವರ್, ವಿಠಲ್ ಗೌಡ, ಪ್ರದೀಪ್ ಎಸ್‌ಐಟಿ ವಿಚಾರಣೆಗೆ ಸೆ.9 ರಂದು ಬೆಳಗ್ಗೆ ಹಾಜರಾಗಿದ್ದಾರೆ.
ಧರ್ಮಸ್ಥಳ ಪ್ರಕರಣ ಸಂಬಂಧಿಸಿದಂತೆ ಆರನೇ ದಿನದ ವಿಚಾರಣೆಗೆ ಎಸ್‌ಐಟಿ ಕಚೇರಿಗೆ ಎಲ್ಲರನ್ನೂ ವಿಚಾರಣೆಗೆ ಕರೆಸಿದ್ದರಿಂದ ನಿನ್ನೆ ಹಿಂಬದಿ ದಾರಿ ಹಿಡಿದಿದ್ದ ಜಯಂತ್ ಇಂದು ಮುಂಭಾಗದ ಹಾದಿಯಿಂದಲೇ ಬಂದಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇವರೊಂದಿಗೆ ಸಂಬಂಧಿಯಾಗಿರುವ ಸಿಂಧೂ ದೇವಿ ಕೂಡ ಎಸ್‌ಐಟಿ ಕಚೇರಿ ವರೆಗೆ ಬಂದು ಬಳಿಕ ಹಿಂದಿರುಗಿದ್ದಾರೆ.
ಇನ್ನೂ ಕೇರಳದ ಯ್ಯೂಟ್ಯೂಬ್ ರ್ ಮನಾಫ್ ಹಾಗೂ ಯ್ಯೂಟ್ಯೂಬರ್ ಅಭಿಷೇಕ್ ಕೂಡ ವಿಚಾರಣೆ ಹಾಜರಾಗಿದ್ದಾರೆ. ಮನಾಫ್ ತಮ್ಮ ರಕ್ಷಣೆಗಾಗಿ ಕೇರಳದಿಂದ ಜನ ಕರೆದುಕೊಂಡು ಬಂದಿರುವುದಾಗಿ ಕೆಲ ಮಾಧ್ಯಮಗಳು ಪ್ರಸಾರ ಮಾಡಿವೆ ಎಂಬ ವಿಚಾರಕ್ಕೆ ಮಾಧ್ಯಮದ ಮುಂದೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ತಾನು ಯಾರನ್ನೂ ಕರೆತಂದಿಲ್ಲ, ನನಗೆ ಯಾವ ಭಯವಿಲ್ಲ, ನಾನು ಸತ್ಯದ ಪರವಾಗಿ ಹೋರಾಡುತ್ತಿದ್ದೇನೆ. ಎಸ್‌ಐಟಿ ಎಲ್ಲ ವಿಚಾರಣೆಗೂ ನಾನು ಸ್ಪಂದಿಸುವುದಾಗಿ ತಿಳಿಸಿದ್ದಾರೆ.