
ಐಬಿಪಿಎಸ್ ಮೂಲಕ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ನೇಮಕಾತಿ: ಅರ್ಜಿ ಆಹ್ವಾನ
Tuesday, September 2, 2025
ಧರವಾಡ: ರಾಷ್ಟ್ರದ ಪ್ರಮುಖ ಗ್ರಾಮೀಣ ಬ್ಯಾಂಕುಗಳ ಸಾಲಿನಲ್ಲಿರುವ ಕರ್ನಾಟಕ ಗ್ರಾಮೀಣ ಬ್ಯಾಂಕು 800 ಆಫೀಸ್ ಅಸಿಸ್ಟಂಟ್ (ಸಿಎಸ್‌ಎ), 500 ಸಹಾಯಕ ವ್ಯವಸ್ಥಾಪಕ (ಸ್ಕೇಲ್ I ಹುದ್ದೆ) ಮತ್ತು 125 ವ್ಯವಸ್ಥಾಪಕ (ಸ್ಕೇಲ್ II)) ಹುದ್ದೆಗಳನ್ನು ಭಾರತೀಯ ಬ್ಯಾಂಕಿಂಗ್ ಸಿಇಬ್ಬಂದಿ ನೇಮಕಾತಿ ಸಂಸ್ಥೆ (ಐಬಿಪಿಎಸ್) ಮೂಲಕ ಭರ್ತಿ ಮಾಡಿಕೊಳ್ಳಲಿದ್ದು, ಅರ್ಹ ಪದವಿಧರರಿಂದ ಆನ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಅಲ್ಲಿಸಲು ಕೊನೆಯ ದಿನ 21/09/2025 ಆಗಿರುತ್ತದೆ. ನೇಮಕಾತಿ ಪ್ರಕ್ರಿಯೆ ಹಾಗೂ ಇನ್ನಿತರ ಮಾಹಿತಿಗಾಗಿ www.ibps.in ಜಾಲತಾಣವನ್ನು ಭೇಟಿ ಮಾಡುವಂತೆ ಬ್ಯಾಂಕಿನ ಪ್ರಕಟಣೆ ತಿಳಿಸಿದೆ.