
ಬುರುಡೆ ಪ್ರಕರಣ: ತನಿಖೆ ನಡೆಯುವಾಗಲೇ ಸಾಕ್ಷಿದಾರನ ಸಂದರ್ಶನ, ಎಸ್‌ಐಟಿಗೆ ದೂರು
ಮಂಗಳೂರು: ಬುರುಡೆ ಪ್ರಕರಣದಲ್ಲಿ ಪೊಲೀಸ್ ವಿಚಾರಣೆ ನಡೆಯುತ್ತಿರುವಾಗಲೇ ದೂರುದಾರ ಚಿನ್ನಯ್ಯನನ್ನು ಯೂಟ್ಯೂಬರ್ಸ್ ಸಾಕ್ಷಿ ರಕ್ಷಣಾ ಕಾಯ್ದೆ ದುರ್ಬಳಕೆ ಮಾಡಿಕೊಂಡು ಆತನ ಸಂದರ್ಶನ ನಡೆಸಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರ್ಗಿ ಬೆಳ್ತಂಗಡಿಯಲ್ಲಿರುವ ವಿಶೇಷ ತನಿಖಾ ತಂಡ(ಎಸ್‌ಐಟಿ) ಕಚೇರಿಗೆ ಮಂಗಳವಾರ ತೆರಳಿ ದೂರು ನೀಡಿದ್ದಾರೆ.
ಸಾಕ್ಷಿ ರಕ್ಷಣೆಯ ಕಾಯ್ದೆಯನ್ನು ಚೆನ್ನಯ್ಯ ದುರ್ಬಳಕೆ ಮಾಡಿದ್ದಾನೆ. ಐದು ಮಂದಿ ಯೂಟ್ಯೂಬರ್ಸ್ ಆತನನ್ನು ಸಂದರ್ಶನ ಮಾಡಿದ್ದಾರೆ. ಕುಡ್ಲ ರಾಮ್ ಪೇಜ್, ದಿ ಟಾಕ್ಸ್, ಸಮೀರ್ ಸೇರಿ ಹಲವು ಪೇಜ್ ಆತನ ಸಂದರ್ಶನ ಮಾಡಿ ಜಾಲತಾಣದಲ್ಲಿ ಹರಿಬಿಟ್ಟಿವೆ. ನ್ಯಾಯಾಂಗ ವ್ಯವಸ್ಥೆಯನ್ನು ಅವರು ದುರ್ಬಳಕೆ ಮಾಡಿಕೊಂಡಿದ್ದಾರೆ. ಮೊದಲೇ ಸಂದರ್ಶನ ಮಾಡಿದರೆ ಅವರೆಲ್ಲ ಷಡ್ಯಂತರದ ಭಾಗವಾಗಿದ್ದಿದ್ದಾರೆ ಎಂದರ್ಥ. ಇಲ್ಲದಿದ್ದರೆ ಸಾಕ್ಷಿ ರಕ್ಷಣಾ ಕಾಯ್ದೆಯನ್ನು ದುರ್ಬಳಕೆ ಮಾಡಿದ್ದಾರೆ ಎಂದು ಅವರು ಆರೋಪಿಸಿದರು.
ಡಿಜಿಟಲ್ ಮೀಡಿಯಾಗೆ ಕರೆಂಟ್ ಅಫೇರ್ಸ್ ಕೊಡುವ ಅಧಿಕಾರ ಇಲ್ಲ. ಬುರುಡೆಗಾಗಿ ಗುಂಡಿ ಅಗೆಯುವುದನ್ನು ಕುಡ್ಲ ರಾಮ್ ಪೇಜ್ ಇದೀಗ ಬಂದ ಸುದ್ದಿ ಎಂದು ತೋರಿಸುತ್ತಿದ್ದರು.
ಕರೆಂಟ್ ಅಪೇರ್ಸ್ ಲೈವ್ ಮಾಡುವ ಅಧಿಕಾರ ಡಿಜಿಟಲ್ ಮೀಡಿಯಾಗೆ ಇಲ್ಲ. ಕೋರ್ಟ್‌ನ ಆದೇಶವನ್ನು ಧಿಕ್ಕರಿಸಿ ಷಡ್ಯಂತರ ಮಾಡಿದ್ದಾರೆ. ಈ ರೀತಿ ಲೈವ್ ಮಾಡಲು ಅವರಿಗೆ ದುಡ್ಡು ಎಲ್ಲಿಂದ ಬಂತು ಎಂಬುದನ್ನು ತನಿಖೆ ಮಾಡಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
4 ವಿಧದಲ್ಲಿ ಷಡ್ಯಂತರ:
ಧರ್ಮಸ್ಥಳದ ವಿರುದ್ಧ ನಾಲ್ಕು ವಿಧದಲ್ಲಿ ಷಡ್ಯಂತರ ನಡೆಸಲಾಗಿದೆ. ಲೇವಲ್ ಒಂದು, ಎರಡು, ಮೂರು, ನಾಲ್ಕು ಎಂದು ನಾಲ್ಕು ವಿಧದಲ್ಲಿ ಷಡ್ಯಂತರ ಮಾಡಿದ್ದಾರೆ. ಮೊದಲೇ ಲೈವ್‌ನಲ್ಲಿ ಚೆನ್ನೈನಲ್ಲಿ ಕುಳಿತು ಮಾಡಿದ್ದಾರೆ. ಎರಡನೇ ಲೈವ್ ತಿಮರೋಡಿ ಮತ್ತು ಗ್ಯಾಂಗ್, ಮೂರನೇ ಲೈವ್ ಯೂಟೂಬರ್ಸ್ ಹಾಗೂ ಸೋಶಿಯಲ್ ಮೀಡಿಯಾ ಪೇಜ್ ಹ್ಯಾಂಡಲರ್ಸ್ ನಾಲ್ಕನೇ ಹಂತದ ಷಡ್ಯಂತರ ಮಾಡಿದ್ದಾರೆ. ಈ ಬಗ್ಗೆ ಹಲವು ಕೋರ್ಟ್ ಆದೇಶದ ವಿವರವನ್ನು ಎಸ್‌ಐಟಿ ತನಿಖೆಯ ಅಧಿಕಾರಿ ಸೈಮನ್ ಅವರಿಗೆ ನೀಡಿದ್ದೇನೆ. ಪ್ರಕರಣದ ಮಾಸ್ಟರ್ಸ್ ಮೈಂಡ್ ಚೆನೈನಲ್ಲಿ ಕುಳಿತಿದ್ದಾನೆ. ಅವರನ್ನು ತನಿಖೆ ಮಾಡಿ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಬೇಕು. ಈ ಬಗ್ಗೆ ದಾಖಲೆ ಕೊಟ್ಟು ತನಿಖೆಗೆ ಮನವಿ ಮಾಡಿದ್ದೇನೆ ಎಂದಿದ್ದಾರೆ.
ಮಾಸ್ಟರ್ಸ್, ತಿಮರೋಡಿ, ಮಟ್ಟಣ್ಣವರ್‌ನ್ನು ಖುಷಿ ಪಡಿಸಲು ವಿಡಿಯೋ ಮಾಡಿದ್ದಾರೆ. ಈ ಬಗ್ಗೆ ಹಣಕಾಸು ವರ್ಗಾವಣೆ ಬಗ್ಗೆ ಇಡಿ ತನಿಖೆ ಮಾಡಲಿದೆ. ಮನಿ ಟ್ರೈಲ್, ಡಿಜಿಟಲ್ ಟ್ರೈಲ್ ಎಲ್ಲದ ಬಗ್ಗೆಯೂ ಎನ್‌ಐಎ ತನಿಖೆ ಕೂಡ ಆಗಬೇಕು ಎಂದಿದ್ದಾರೆ.
ವಕೀಲರ ವಿರುದ್ಧ ಮತ್ತೆ ದೂರು
ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರದ ಆರೋಪದಲ್ಲಿ ಸುಜಾತ ಭಟ್ ಪರ ವಕೀಲ ಮಂಜುನಾಥ್ ಎಂಬವರ ಮೇಲೆ ರಾಜೇಂದ್ರ ದಾಸ್ ಎಂಬವರು ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರ ವಿರುದ್ಧ ಅಶ್ಲೀಲವಾಗಿ ಮಾತನಾಡಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟ ಆರೋಪ ಇದೆ. ಅಲ್ಲದೆ ಯೂಟ್ಯೂಬ್ ಚಾನಲ್‌ಗೆ ಸಂದರ್ಶನ ನೀಡುವ ಸಂದರ್ಭ ಆಶ್ಲೀಲವಾಗಿ ಮಾತನಾಡಿದ ಬಗ್ಗೆ ದೂರಲಾಗಿತ್ತು. ದೂರು ದಾಖಲಿಸಿದ ವಿಚಾರದಲ್ಲಿ ವಿಚಾರಣೆಗೆ ಹಾಜರಾಗುವಂತೆ ಮಂಜುನಾಥ್‌ಗೆ ಬೆಳ್ತಂಗಡಿ ಪೊಲೀಸರು ನೋಟಿಸ್ ನೀಡಿದ್ದರು. ಬೆಂಗಳೂರಿಗೆ ತೆರಳಿ ನೋಟೀಸ್ ನೀಡಿದ ಬೆಳ್ತಂಗಡಿ ಪೊಲೀಸರು ಸೆ.7ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.
ಎಸ್‌ಐಟಿ ತನಿಖೆ ವಿಚಾರವಾಗಿ ಸುಳ್ಳು ಮಾಹಿತಿ ನೀಡಿದ್ದಕ್ಕೆ ಮಂಜುನಾಥ್ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ಪ್ರವೀಣ್ ಎಂಬವರು ದೂರು ನೀಡಿದ್ದರು.