ಮಹಿಳೆಯೊರ್ವರ ಮನೆಗೆ ನುಗ್ಗಿ ಗೋ ಕಳ್ಳರಿಂದ ಬೆದರಿಕೆ: ಖಂಡನೀಯ

ಮಹಿಳೆಯೊರ್ವರ ಮನೆಗೆ ನುಗ್ಗಿ ಗೋ ಕಳ್ಳರಿಂದ ಬೆದರಿಕೆ: ಖಂಡನೀಯ

ಕಾರ್ಕಳ: ಗೋ ಕಳ್ಳರ ಅಟ್ಟಹಾಸ ಮಿತಿ ಮೀರುತ್ತಿದೆ. ಹೈನುಗಾರಿಕೆ ನಡೆಸಿ ಜೀವ ನಡೆಸುತ್ತಿರುವ ಕಾರ್ಕಳ ತಾಲೂಕಿನ ಶಿರ್ಲಾಲು ಗ್ರಾಮದದಲ್ಲಿ ಮಹಿಳೆಯ ಮನೆಯ ಹಟ್ಟಿಯಿಂದಲೇ ದನಗಳ ಕಳ್ಳತನ ನಡೆದಿದೆ. ಮಾತ್ರವಲ್ಲದೆ ಮಹಿಳೆಗೆ ಮಾರಕಾಸ್ತ್ರದಿಂದ ಬೆದರಿಸಿರುವುದು ಅತಂಕಕಾರಿ ಘಟನೆ. 

ಈ ರೀತಿ ಪೋಲಿಸರ ಭಯವಿಲ್ಲದೆ ಕಳ್ಲತನ ನಡೆಯುವುದನ್ನು ನೋಡಿದರೆ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾದ ಹಾಗೆ ತೋರುತ್ತಿದೆ. ಈ ರೀತಿಯ ಘಟನೆಗಳಿಂದ ಜನಸಾಮಾನ್ಯರು ಆತಂಕದಲ್ಲಿದ್ದು ಪೊಲೀಸ್ ಇಲಾಖೆಯ ಮೇಲೆ ನಂಬಿಕೆ ಕಳೆದುಕೊಂಡಂತಿದೆ ಪರೋಕ್ಷ ವಾಗಿ ಪೊಲೀಸ್ ಇಲಾಖೆ ಬೆಂಬಲ ಈ ದುಷ್ಕರ್ಮಿಗಳಿಗೆ ಸಿಗುತ್ತಿದೆಯೋ ಎನ್ನುವ ಮಾತುಗಳು ಕೂಡ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

ಈ ರೀತಿಯ ಪ್ರಕರಣ ಕಾರ್ಕಳದಲ್ಲಿ ನಡೆಯುತ್ತಿರುವುದು ಇದೇ ಮೊದಲಲ್ಲ ಆದರೆ ಪೋಲಿಸ್ ಇಲಾಖೆ ದನಗಳ್ಳರ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಸಂಪೂರ್ಣ ವಿಫಲರಾಗಿದ್ದಾರೆ. ಒಂದು ರೀತಿಯಲ್ಲಿ ರಾಜ್ಯ ಕಾಂಗ್ರೆಸ್ಸ್ ಸರ್ಕಾರದ ಓಲೈಕೆ ನೀತಿಯು ಗೋ ಕಳ್ಳರಿಗೆ ವರದಾನ ಆದಂತಿದೆ. ಈ ದುಷ್ಕೃತ್ಯದ ಹಿಂದಿರುವ ದುಷ್ಕರ್ಮಿಗಳನ್ನು ಶೀಘ್ರವಾಗಿ ಬಂಧಿಸದಿದ್ದಲ್ಲಿ ಸಮಸ್ತ ಹಿಂದೂ ಸಮಾಜ ತಮ್ಮ ರಕ್ಷಣೆಗೆ ಬೀದಿಗಿಳಿದು ಪೊಲೀಸ್ ಠಾಣೆಯ ಮುಂದೆಯೇ ಪ್ರತಿಭಟಿಸುವ ಸಮಯ ಬರಬಹುದು ಎಂದು ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಶೆಟ್ಟಿ ಕುಕ್ಕುಂದೂರು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article