ಕರ್ಣಾಟಕ ಬ್ಯಾಂಕ್‌ನಿಂದ ಧರ್ಮಸ್ಥಳಕ್ಕೆ ‘ಟೆಂಪೊ ಟ್ರಾವೆಲ್ಲರ್’ ವಾಹನ ಕೊಡುಗೆ

ಕರ್ಣಾಟಕ ಬ್ಯಾಂಕ್‌ನಿಂದ ಧರ್ಮಸ್ಥಳಕ್ಕೆ ‘ಟೆಂಪೊ ಟ್ರಾವೆಲ್ಲರ್’ ವಾಹನ ಕೊಡುಗೆ


ಉಜಿರೆ: ಕರ್ಣಾಟಕ ಬ್ಯಾಂಕ್ ವತಿಯಿಂದ ಸೋಮವಾರ ಧರ್ಮಸ್ಥಳಕ್ಕೆ ವಾಹನವನ್ನು ಕೊಡುಗೆಯಾಗಿ ಅರ್ಪಿಸಿದರು.

ಕರ್ನಾಟಕ ಬ್ಯಾಂಕಿನ ಎಂ.ಡಿ. ಮತ್ತು ಸಿ.ಇ.ಒ ರಾಘವೇಂದ್ರ ಶ್ರೀನಿವಾಸ ಭಟ್, ಉಡುಪಿ ಪ್ರಾದೇಶಿಕ ಕಚೇರಿಯ ಸಹಾಯಕ ಪ್ರಧಾನ ವ್ಯವಸ್ಥಾಪಕ ವಾದಿರಾಜ ಭಟ್ ಮತ್ತು ಉಡುಪಿ ರಥಬೀದಿ ಶಾಖೆಯ ಹಿರಿಯ ಶಾಖಾ ಪ್ರಬಂಧಕ ಪ್ರಶಾಂತ್ ಎಂ. ರಾವ್ ವಾಹನವನ್ನು ಕೊಡುಗೆಯಾಗಿ ನೀಡಿದರು.

ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಡಿ. ಸುರೇಂದ್ರ ಕುಮಾರ್, ಡಿ. ಹರ್ಷೇಂದ್ರ ಕುಮಾರ್ ಮತ್ತು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಪ್ರೊ. ಎಸ್. ಸತೀಶ್ಚಂದ್ರ, ಫೋರ್ಸ್ ಮೋಟಾರ್ಸ್‌ನ ಮ್ಯಾನೇಜರ್ ಜಗದೀಶ್, ಮನೀಶ್ ಫೋರ್ಸ್ ಸೇಲ್ಸ್ ಎಕ್ಸಿಕ್ಯುಟಿವ್ ಫೋರ್ಸ್ ಮೋಟಾರ್ಸ್, ಆಕಾಶ್ ಸೇಲ್ಸ್ ಎಕ್ಸಿಕ್ಯುಟಿವ್ ಫೋರ್ಸ್ ಮೋಟಾರ್ಸ್ ಉಪಸ್ಥಿತರಿದ್ದರು.

ಕೊಡುಗೆಯನ್ನು ಸ್ವೀಕರಿಸಿದ ಹೆಗ್ಗಡೆಯವರು ಬ್ಯಾಂಕಿಗೆ ಕೃತಜ್ಞತೆ ಸಲ್ಲಿಸಿ ಈ ವಾಹನವನ್ನು ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಸೇವಾ ಚಟುವಟಿಕೆಗಳಿಗೆ ಬಳಸಲಾಗುವುದು ಎಂದು ಹೇಳಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article