ಉಡುಪಿ ಜಿಲ್ಲೆ ಸಾಂಸ್ಕೃತಿಕ ರಾಯಬಾರಿಯಾಗಿ ಗುರುತಿಸಿಕೊಂಡಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

ಉಡುಪಿ ಜಿಲ್ಲೆ ಸಾಂಸ್ಕೃತಿಕ ರಾಯಬಾರಿಯಾಗಿ ಗುರುತಿಸಿಕೊಂಡಿದೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್


ಕಾರ್ಕಳ: ಉಡುಪಿ ಜಿಲ್ಲೆಯು ಸಾಂಸ್ಕೃತಿಕ ರಾಯಬಾರಿಯಾಗಿ ಗುರುತಿಸಿಕೊಂಡಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. 

ಅವರು ಇಂದು ಕಾರ್ಕಳ ತಾಲೂಕಿನ ನೀರೆ ಗ್ರಾಮ ಪಂಚಾಯಿತಿಯ ನೂತನ ಕಚೇರಿ ಕಟ್ಟಡ, ಸಭಾಭವನ, ಸಂಜೀವಿನಿ ಸಭಾಭವನ ಹಾಗೂ ಗ್ರಾಮ ಆಡಳಿತ ಅಧಿಕಾರಿಯವರ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಭಾರತ ಹಳ್ಳಿಗಳ ದೇಶವಾಗಿದ್ದು, ಗಾಂಧಿಯ ಕಲ್ಪನೆ ಗ್ರಾಮಸ್ವರಾಜ್ಯ ಕನಸು ನನಸಾಗಿಸುವಂತೆ ಮಾಡಿದೆ. ನೀರೆ ಗ್ರಾಮ ಮಹಿಳಾ ಸ್ನೇಹಿ ಗ್ರಾಮಪಂಚಾಯಿತಿಯಾಗಿ ಗುರುತಿಸಿಕೊಂಡಿರುವುದು ಹೆಮ್ಮೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಗ್ರಾಮಿಣ ಭಾಗದ ಜನರು 9/11 ಸಮಸ್ಯೆಯನ್ನು ಎದುರಿಸುತಿದ್ದು, ಇದರ ಬಗ್ಗೆ ಡಿಸಿ ಸಚಿವರ ಜೊತೆ ಚರ್ಚಿಸಿ ಸರಿಪಡಿಸಲಾಗುವುದು ಎಂದು ಬರವಸೆ ನೀಡಿದರು. ಕಾರ್ಕಳ ವಿಧಾನಸಭಾ ವ್ಯಾಪ್ತಿಯ ರಸ್ತೆ ಅಭಿವೃದ್ಧಿಗೆ 25 ಕೋಟಿ ಅನುದಾನ ನೀಡಲಾಗುವುದು ಎಂದರು.

ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರಕಾರಿಕ ಕಛೇರಿಗಳು ಗ್ರಾಮಸ್ತರಿಗೆ ಪರಿಹಾರ ನೀಡುವ ಕಟ್ಟಡಗಳಾಗಬೇಕು. ತಾಲೂಕಿನ ಎಲ್ಲಾ ಸರಕಾರಿ ಕಟ್ಟಡ ಪುನರುಜ್ಜಿವನಗೊಂಡಿವೆ. ಸರಕಾರದ ಜೊತೆ ಸ್ಥಳಿಯ ಉದ್ಯಮಗಳ ಸಿಎಸ್‌ಆರ್ ಫಂಡ್‌ಗಳ ಮೂಲಕ ಉತ್ತೆಜನಗೊಂಡಿವೆ. ಕರಾವಳಿ ಜಿಲ್ಲೆಗಳಲ್ಲಿ ಅಡಳಿತಯಂತ್ರ ಸುಲಲಿತವಾಗಿದೆ. ದಾನಿಗಳ ಸಹಕಾರವೆ ಹೆಚ್ಚಾಗಿದೆ.

ಬೆಂಗಳೂರನ್ನು ಕೇಂದ್ರಿಕೃತವಾಗಿ ಕಾನುನು ರೂಪಿತವಾದ ಕಾರಣ ಕರಾವಳಿ ಭಾಗದಲ್ಲಿ ಹೊಸಮನೆಗಳು ಕಟ್ಟಲು ಸಾಧ್ಯವಾಗುತಿಲ್ಲ, 9/11 ಸಮಸ್ಯೆಯಿಂದಾಗಿ 4500 ಅರ್ಜಿಗಳು ಬಾಕಿ ಉಳಿದಿವೆ. ಕರಾವಳಿ ಭಾಗದಲ್ಲಿ ಕೆಂಪುಕಲ್ಲಿನ ಸಮಸ್ಯೆಯಿಂದ ಲಕ್ಷಾಂತರ ಕಟ್ಟಡ ಕೂಲಿ ಕಾರ್ಮಿಕರು ಹಾಗೂ ಲಾರಿಮಾಲಿಕರು ಚಾಲಕರು ಕೆಲಸವಿಲ್ಲದೆ ಬಯಲಿಗೆ ಬಂದಿದ್ದಾರೆ. ಅದಕ್ಕಾಗಿ ಸರಕಾರ ನಿಯಾಮವಲಿಗಲನ್ನು ಸಡಿಸಿ ೩ ಜಿಲ್ಲೆಗಳಿಗೆ ಅನುಕೂಲವಾಗುವಂತೆ ವಿಶೆಷ ಮಾನ್ಯತೆ ನೀಡಬೇಕು ಎಂದರು.

20 ವರ್ಷಗಳಿಗಿಂತ ಈ ಬಾರಿ ಅತಿ ಹೆಚ್ಚು ಮಳೆ ತಾಲುಕಿನಲ್ಲಿ ಸುರಿದಿದ್ದು, ಮಳೆಯಿಂದಾಗಿ ರಸ್ತೆಗಳು ಹಾಳಾಗಿವೆ ಗುಂಡಿಮುಚ್ಚಲು ಅನುದಾನವನ್ಮಾದರು ನೀಡಿ ಎಂದು ಸಚಿವರನ್ನು ಒತ್ತಾಯಿಸಿದರು.

ಸಂಸದ ಕೋಟ ಶ್ರಿನಿವಾಸ ಪೂಜಾರಿ ಮಾತನಾಡಿ, ರಾಜ್ಯದ 5950 ಗ್ರಾಮ ಪಂಚಾಯಿತಿಗಳ ಪೈಕಿ ನೀರೆ ಗ್ರಾಮ ಪಂಚಾಯಿತಿ ಕನಸುಗಳನ್ನು ಹೊತ್ತ ಕಟ್ಟಡವಾಗಿ ರಾಜ್ಯದ ಮಾದರಿಯಾಗಿ ಪರಿಣಮಿಸಿದೆ, ಗ್ರಾಮ ಪಂಚಾಯಿತಿಗಳು ಅಧಿಕಾರ ವಿಕೇಂದ್ರೀಕರಣದ ಮೂಲಕ ಗ್ರಾಮ ಸರಕಾರದಂತೆ ಕಾರ್ಯನಿರ್ವಹಿಸುತ್ತಿದ್ದು, ಈಗಾಗಲೇ ಪಂಚಾಯಿತಿ ವ್ಯಾಪ್ತಿಯಲ್ಲಿ ೨೯ ಇಲಾಖೆ ಸೇವೆಗಳು ಲಭ್ಯವಾಗುತ್ತಿವೆ. ಇನ್ನೂ ಹೆಚ್ಚಿನ ಇಲಾಖೆಗಳ ಸೇವೆಗಳು ಪಂಚಾಯಿತಿ ಮಟ್ಟದಲ್ಲೇ ಸಿಗುವಂತಾಗಬೇಕು, ಜನಸಾಮಾನ್ಯರಿಗೆ ಸೌಲಭ್ಯಗಳನ್ನು ಒದಗಿಸಲು ಇದು ಸಹಕಾರಿ ಆಗುತ್ತದೆ ಎಂದರು.

ಗ್ರಾಮ ಪಂಚಾಯಿತಿಗಳು ಪ್ರತಿಯೊಂದು ಮನೆಮನೆಗೆ ದಿನಕ್ಕೆ 50 ಲೀಟರ್ ನೀರು ಒದಗಿಸಬೇಕು, ಯೋಜನೆಗಳು ಸಮರ್ಪಕವಾಗಿ ನಡೆಯಬೇಕು. ಜೊತೆಗೆ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕೆಂದು ಒತ್ತಾಯಿಸಿದರು.

ಮನೆ ಕಟ್ಟಲು ನೀಡಲಾಗುತ್ತಿದ್ದ 9/11 ಅಧಿಕಾರವನ್ನು ಜಿಲ್ಲಾಸ್ಥರ ಯೊಜನಾ ಪ್ರಾಧಿಕಾರಕ್ಕೆ ವರ್ಗಾಯಿಸಿರುವುದರಿಂದ, ಜಿಲ್ಲೆಯಾದ್ಯಂತ 6000ಕ್ಕೂ ಹೆಚ್ಚು ಅರ್ಜಿಗಳು ಬಾಕಿ ಉಳಿದಿವೆ. ಇದರಿಂದ ಸಾಮಾನ್ಯ ಜನತೆಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಆದ್ದರಿಂದ 9/11 ಅಧಿಕಾರವನ್ನು ಮತ್ತೆ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸುವಂತೆ ಉಸ್ತುವಾರಿ ಸಚಿವರನ್ನು ಮನವಿ ಮಾಡಿದರು.

ವಿಧಾನ ಪರಿಷತ್‌ನ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ, ಎರಡು ಕೋಟಿಯಿಂದ 50 ಕೋಟಿಗೆ ಅನುದಾನ ಮಿತಿ ಹೆಚ್ಚಿಸಬೇಕು ಎಂದು ಸರಕಾರವನ್ನು ಒತ್ತಾಯಿಸಿದರು. 

ನೀರೆ ಗ್ರಾಂ ಪಂಚಾಯತ್ ಪಂಚಾಯತ್ ಅಧ್ಯಕ್ಷ ಸಚ್ಚಿದಾನಂದ ಎಸ್. ಪ್ರಭು, ಉದಯ ಕುಮಾರ್ ಶೆಟ್ಟಿ ಸಮುದಾಯ ಭವನವನ್ನು ನಿರ್ಮಿಸುವಂತೆ ಸಚಿವರನ್ನು ಒತ್ತಾಯಿಸಿದರು.

ಕಾರ್ಕಳ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿ.ಪಂ., ಉಪಕಾರ್ಯದರ್ಶಿ ಎಸ್.ಎಸ್. ಕಾದ್ರೋಳ್ಳಿ, ಉಡುಪಿ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಹಾಗೂ ಕಾರ್ಕಳ ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಸುಬ್ರಹ್ಮಣ್ಯ ಶೆಟ್ಟಿ, ಕಾರ್ಕಳ ತಹಸೀಲ್ದಾರ್ ಪ್ರದೀಪ್,ಆರ್, ಕಾರ್ಕಳ ತಾಲೂಕು ಪಂಚಾಯತ್ ಇಒ ಪ್ರಶಾಂತ್ ರಾವ್, ಉದ್ಯಮಿ ದಾಮೋದರ ಕಾಮತ್, ಸಂತೋಷ್ ವಾಗ್ಳೆ, ಕಡಾರಿ ರವೀಂದ್ರ ಪ್ರಭು, ಉಡುಪಿ ಜಿಲ್ಲಾ ಎಸ್ಪಿ ಹರಿರಾಂ ಶಂಕರ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪೋಷಣ್ ಅಭಿಯಾನದ ಮೂಲಕ ಐದು ಜನ ಗರ್ಭಿಣಿ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮವನ್ನು ನೆರವೆರಿಸಿದರು. ಮಾಜಿ ತಾ.ಪಂ. ಅಧ್ಯಕ್ಷ ವಿಕ್ರಂ ಹೆಗ್ಡೆ ಪ್ರಸ್ತಾವಿಕ ಮಾತನಾಡಿದರು. ಪಂ. ಅಭಿವೃದ್ಧಿ ಅಧಿಕಾರಿ ಅಂಕಿತಾ ನಾಯಕ್ ಸ್ವಾಗತಿಸಿ, ರಮೇಶ್ ಕಲ್ಲೊಟ್ಟೆ ಕಾರ್ಯಕ್ರಮ ನಿರೂಪಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article