ಗೋಪಾಡಿಯಲ್ಲಿ ಸಮುದ್ರಕ್ಕೆ ಈಜಲು ಹೋದ ನಾಲ್ವರು ಯುವಕರು ನೀರು ಪಾಲು

ಗೋಪಾಡಿಯಲ್ಲಿ ಸಮುದ್ರಕ್ಕೆ ಈಜಲು ಹೋದ ನಾಲ್ವರು ಯುವಕರು ನೀರು ಪಾಲು


ಕುಂದಾಪುರ: ಸಮುದ್ರಕ್ಕೆ ಈಜಲು ಹೋದ ಬೆಂಗಳೂರಿನ ನಾಲ್ವರು ಯುವಕರು ನೀರುಪಾಲಾಗಿ, ಇಬ್ಬರು ಮೃತಪಟ್ಟು ಓರ್ವ ನಾಪತ್ತೆಯಾಗಿ ಇನ್ನೋರ್ವನನ್ನು ರಕ್ಷಿಸಿದ ಘಟನೆ ಕುಂದಾಪುರ ತಾಲೂಕಿನ ಗೋಪಾಡಿ ಚೆರ್ಕಿ ಕಡು ಎಂಬಲ್ಲಿ ಸೆ. 7 ರ ಭಾನುವಾರ ಮಧ್ಯಾಹ್ನ ಸಂಭವಿಸಿದೆ.

ಬೆಂಗಳೂರಿಂದ ಬಂದಿದ್ದ 10 ಮಂದಿ ಯುವಕರ ತಂಡವು ಕುಂಭಾಶಿಯ ಖಾಸಗಿ ವಸತಿಗೃಹದಲ್ಲಿ ತಂಗಿದ್ದರು. ಇಂದು ಮಧ್ಯಾಹ್ನ 9 ಮಂದಿ ಯುವಕರು ಸಮುದ್ರ ಸ್ನಾನ ಮಾಡಲೆಂದು ಕುಂಭಾಶಿ ಸಮೀಪದ ಗೋಪಾಡಿಯ ಚೆರ್ಕಿ ಕಡು ಎಂಬಲ್ಲಿ ಸಮುದ್ರಕ್ಕೆ ಇಳಿದ್ದಿದ್ದರು.

ಸಮುದ್ರದ ಅಬ್ಬರದ ಅಲೆಗೆ ನಾಲ್ವರು ಕೊಚ್ಚಿ ಹೋಗಿದ್ದು, ಓರ್ವನನ್ನು ತಕ್ಷಣ ಸ್ಥಳೀಯರು ಹಾಗೂ ಜೊತೆಗೆ ಇದ್ದ ಯುವಕರು ಸೇರಿ ಎತ್ತಿ ಮೇಲಕ್ಕೆ ತಂದಿದ್ದಾರೆ. ಆದರೆ ಆತ ಉಪ್ಪು ನೀರು ಕುಡಿದು ಗಂಭೀರ ಸ್ಥಿತಿಯಲ್ಲಿದ್ದು ತಕ್ಷಣ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ತಕ್ಷಣ ಮುಳುಗು ತಜ್ಞ ಈಶ್ವರ್ ಮಲ್ಪೆಯವರನ್ನು ಕರೆಸಲಾಯಿತು. ಅವರು  ನಾಗರಾಜ್ ಪುತ್ರನ್ ಹಾಗೂ ಸ್ಥಳೀಯರ ಸಹಕಾರದಿಂದ ಇಬ್ಬರ ಮೃತದೇಹವನ್ನು ಪತ್ತೆ ಹಚ್ಚಿದ್ದಾರೆ.

ಇನ್ನೊರ್ವ ನಾಪತ್ತೆ ಆಗಿದ್ದಾನೆ. ಅವನಿಗಾಗಿ ಹುಡುಕಾಟ ನಡೆಸಲಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article