ಗುರುಗಳ ಸಂದೇಶವನ್ನು ಸರಿಯಾಗಿ ಅಥ೯ಮಾಡಿಕೊಳ್ಳಿ: ಶಾಸಕ ಕೋಟ್ಯಾನ್
ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆ
ಖ್ಯಾತ ವಾಗ್ಮಿ ಎನ್.ಆರ್ ದಾಮೋದರ ಶರ್ಮ ಸಂದೇಶ ನೀಡಿ ಮಾತನಾಡಿ ಇಲ್ಲಿ ಹುಟ್ಟಿರುವರು ಎಲ್ಲರೂ ಸಮಾಜ ಮತ್ತು ಇಡೀ ದೇಶದ ಆಸ್ತಿ. ತಾವು ಈ ಸಮಾಜದ ಆಸ್ತಿ ಎಂದು ತಿಳಿದಿದ್ದ ನಾರಾಯಣ ಗುರುಗಳು ಉತ್ತಮ ತತ್ವ ಆದಶ೯ಗಳನ್ನು ಮೈಗೂಡಿಸಿಕೊಂಡಿದ್ದರು.
ಆದ್ದರಿಂದ ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕಲಿಸಿ, ಗುರುಗಳ ಸಂದೇಶದ ಮಹತ್ವವನ್ನು ತಿಳಿಸಿಕೊಡಿ ಎಂದು ಸಲಹೆ ನೀಡಿದರು.
ಮೂಡುಬಿದಿರೆ ಬೃಹ್ಮಶ್ರೀ ಗುರು ನಾರಾಯಣ ಸೇವಾ ಸಂಘದ ಅಧ್ಯಕ್ಷ , ವಕೀಲ ಸುರೇಶ್ ಕೆ. ಪೂಜಾರಿ ಅಧ್ಯಕ್ಷತೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಾದ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ ಸತೀಶ್ ಎನ್ ಬಂಗೇರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸತೀಶ್ಚಂದ್ರ ಸಾಲ್ಯಾನ್ ಇರುವೈಲು ಪಾಣಿಲ, ಅಂತರಾಷ್ಟ್ರೀಯ ಡಿಜಿ ಕ್ಲಬ್ ಗೋಲ್ಡ್ ಪ್ರಶಸ್ತಿ ಪುರಸ್ಕೃತ ಮಾನಸ ಡಿಜಿಟಲ್ಸ್ ನ ರವಿ ಕೋಟ್ಯಾನ್ ಅವರುಗಳನ್ನು ಸನ್ಮಾನಿಸಲಾಯಿತು.
ಲಕ್ಷ್ಮಣ್ ಪೂಜಾರಿ, ಸುಶಾಂತ್ ಕರ್ಕೇರ, ಹಾಗೂ ನವಾನಂದ ಒಂಟಿಕಟ್ಟೆ ಸನ್ಮಾನಿತರ ಪತ್ರವನ್ನು ವಾಚಿಸಿದರು.
ಪುರಸಭಾ ಉಪಾಧ್ಯಕ್ಷ ನಾಗರಾಜ್ ಪೂಜಾರಿ ಒಂಟಿಕಟ್ಟೆ ಹಾಗೂ ಕಾಮಿಡಿ ಕಿಲಾಡಿಯ ಖ್ಯಾತಿಯ ಚೇತನ್ ಅವರನ್ನು ಗೌರವಿಸಲಾಯಿತು.
ಅಮೃತ ಮಹೋತ್ಸವ ಸಮಿತಿಯ ಸಂಚಾಲಕ ಮತ್ತು ಮಕ್ಕಳ ವಿಶೇಷ ತಜ್ಞ ಡಾ. ಮುರಳೀಕೃಷ್ಣ ಆರ್ ವಿ, ಎಮ್.ಸಿ.ಎಸ್ ಬ್ಯಾಂಕ್ ನ ವಿಶೇಷ ಕಾರ್ಯ ನಿರ್ವಹಣಾಧಿಕಾರಿ ಚಂದ್ರಶೇಖರ ಎಂ,ಬೆಳ್ತಂಗಡಿ ಶ್ರೀ ಗುರುದೇವ ವಿವಿದ್ದೋದ್ದೇಶ ಸಹಕಾರಿ ಸಂಘದ ಮೂಡುಬಿದಿರೆ ಶಾಖಾ ಪ್ರಬಂಧಕ ಅಭಿಜಿತ್, ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಮೂಳೆ ಶಸ್ತ್ರಚಿಕಿತ್ಸಕ ಡಾ. ಉಜ್ವಲ್ ಯು ಸುವರ್ಣ, ನೆಲ್ಲಿಕಾರು ವ್ಯವಸಾಯ ಸಹಕಾರಿ ಸಂಘದ ನಿರ್ದೇಶಕ ರುಕ್ಕಯ್ಯ ಪೂಜಾರಿ ಅಳಿಯೂರು, ಶ್ರೀ ನಾರಾಯಣ ಗುರು ಸೇವಾದಳದ ಅಧ್ಯಕ್ಷ ದಿನೇಶ್ ಪೂಜಾರಿ ಮಾರೂರು, ನಾರಾಯಣ ಗುರು ಮಹಿಳಾ ಘಟಕದ ಅಧ್ಯಕ್ಷೆ ಸವಿತಾ ದಿನೇಶ್ , ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶಿಬಾನಿ ಆನಂದ್ ಪ್ರಾರ್ಥಿಸಿ, ಕಾರ್ಯದರ್ಶಿ ಗಿರೀಶ್ ಕುಮಾರ್ ಹಂಡೇಲು ಸ್ವಾಗತಿಸಿದರು. ಶ್ರೀರಾಜ್ ಸನಿಲ್ ಕಾರ್ಯಕ್ರಮ ನಿರೂಪಿಸಿ, ಉಪಾಧ್ಯಕ್ಷ ರವೀಂದ್ರ ಕರ್ಕೇರ ವಂದಿಸಿದರು.
ಬಳಿಕ ಬಲೆ ತೆಲಿಪಾಲೆ, ಮಜಾಭಾರತ, V4 ಕಾಮಿಡಿ ಪ್ರೀಮಿಯರ್ ಲೀಗ್ ಚಾಂಪಿಯನ್ ಖ್ಯಾತಿಯ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರು ಚಲನಚಿತ್ರ ನಟ "ತೆಲಿಕೆದ ತೆನಾಲಿ" ಸುನಿಲ್ ನೆಲ್ಲಿಗುಡ್ಡೆ ನೇತೃತ್ವದ ತೆಲಿಕೆದ ತೆನಾಲಿ ತಂಡದಿಂದ ತೆಲಿಕೆದ ಬರ್ಸ ಕಾಮಿಡಿ-90 ಕಾರ್ಯಕ್ರಮವು ನಡೆಯಿತು.

