ಬದ್ರಿಯಾ ಜುಮಾ ಮಸ್ಜಿದ್‌ನಲ್ಲಿ ಸಂಭ್ರಮದ 1500ನೇ ಈದ್ ಮೀಲಾದುನ್ನೆಬಿ

ಬದ್ರಿಯಾ ಜುಮಾ ಮಸ್ಜಿದ್‌ನಲ್ಲಿ ಸಂಭ್ರಮದ 1500ನೇ ಈದ್ ಮೀಲಾದುನ್ನೆಬಿ


ಮಂಗಳೂರು: ಬದ್ರಿಯಾ ಜುಮಾ ಮಸ್ಜಿದ್ ಬಜಾಲ್ ನಂತೂರು ಮಂಗಳೂರು ಇದರ ಅದೀನದಲ್ಲಿ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ತಂಗಳ್ ಅವರ 1500ನೇ ಈದ್ ಮೀಲಾದುನ್ನೆಬಿ ಸಡಗರ ಸಂಭ್ರಮದಿಂದದಿಂದ ಆಚರಿಸಲಾಯಿತು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಜಮಾಅತ್ ಅಧ್ಯಕ್ಷ ಅಬ್ದುಲ್ ರವೂಫ್ ಅವರು ಧ್ವಜಾರೋಹಣ ಗೈದು ಪ್ರಸ್ತುತ ರ‍್ಯಾಲಿಗೆ ಚಾಲನೆ ನೀಡಿದರು.


ಕಾರ್ಯಕ್ರಮನ್ನು ಜಮಾಅತ್ ಖತೀಬರಾದ ಅಬ್ದುಲ್ ನಾಸಿರ್ ಸಅದಿಯವರು ದುಆ ಮಾಡಿ ಉದ್ಘಾಟನೆ ಮಾಡಿ ಮಾತನಾಡಿದ ಅವರು ಈ ಮೀಲಾದ್ ರ‍್ಯಾಲಿ ಶಾಂತಿ ಸಮಾಧಾನ ಸೌಹಾರ್ದತೆಯನ್ನು ಸಾರುವುದಾಗಿದೆ. ಪರಸ್ಪರ ಸೌಹಾರ್ದತೆಯೊಂದಿಗೆ ಬಾಳೋಣ ಎಂದು ಹೇಳಿದರು.   


ರ‍್ಯಾಲಿಯಲ್ಲಿ ಹಯತುಲ್ ಇಸ್ಲಾಂ ಮದರಸ ಬಜಾಲ್ ನಂತೂರ್, ಫೈಝಲ್ ನಗರ ನಮಾವುಲ್ ಇಸ್ಲಾಂ ಮದರಸದ ವಿದ್ಯಾರ್ಥಿನಿಯರು ಸ್ಕೌಟ್, ಫ್ಲವರ್ ಶೋ, ದಫ್ ಪ್ರದರ್ಶಿಸಿದರು.


ತರ್ಬಿಯತುಲ್ ಇಸ್ಲಾಂ ದರ್ಸ್ನಲ್ಲಿ ಕಲಿಯುವ ಮುತಃಲ್ಲಿಮ್‌ನವರು ಭಾಗವಹಿಸಿದರು.


ರ‍್ಯಾಲಿಯಾ ಉದ್ದಕ್ಕೂ ಐಸ್ಕ್ರಿಮ್, ಚಾಕ್ಲೆಟ್, ತಂಪು ಪಾನೀಯ, ಫಲೂದ, ಬಿರಿಯಾನಿ, ಹಣ್ಣು ಅಂಪಲು ಇನ್ನಿತರು ಸಿಹಿತಿಂಡಿ ನೀಡಿದರು.

ಬದ್ರಿಯಾ ಜುಮ್ಮಾ ಮಸೀದಿಯ ಉಪಾಧ್ಯಕ್ಷರಾದ ಅಶ್ರಫ್ ಕೆ., ಹನೀಫ್ ಎಚ್.ಎಸ್., ಎಂ.ಎಚ್. ಮುಹಮ್ಮದ್ ಫೈಝಲ್ ನಗರ್, ಪ್ರ. ಕಾರ್ಯದರ್ಶಿ ಅಬ್ದುಲ್ ಹಮೀದ್, ಕೊಸಧಿಕಾರಿ ಅಬ್ದುಲ್ ಸಲಾಂ, ಸಂಚಾಲಕರು ಬಿ. ಪಕೃದ್ದಿನ್, ಮಾಜಿ ಅಧ್ಯಕ್ಷರು ಬಿ.ಎನ್. ಅಬ್ಬಾಸ್, ಗೌಸಿಯ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಝಕ್, ಖತೀಬರಾದ ಇಸಾಕ್ ಹಮೀದಿ, ಉಪಾಧ್ಯಕ್ಷರು ಮುಹಮ್ಮದ್ ರಫೀಕ್, ತರ್ಬಿಯತುಲ್ ಇಸ್ಲಾಂ ಸಮಿತಿ ಅಧ್ಯಕ್ಷರಾದ ಹುಸೇನ್ ಶಾಂತಿನಗರ, ಜೆ.ಎಫ್. ಅಸೋಸಿಯೇಷನ್ (ರಿ)ಅಧ್ಯಕ್ಷ ನಝೀರ್ ಬಜಾಲ್, ಎಸ್‌ಕೆಎಸ್‌ಎಸ್‌ಎಫ್‌ನ ಅಧ್ಯಕ್ಷ ಹಮ್ಮಬ್ಬಾ ಮೋನಕ, ನಾಸೀರ್ ಎನ್‌ಎಸ್‌ಆರ್ ಹಾಗೂ ಜಮಾತರು ಭಾಗವಹಿಸಿದರು.

ಸದರ್ ಮುಹಲ್ಲಿಮ್‌ನ ಅಬೂಬಕ್ಕರ್ ಮುಸ್ಲಿಯಾರ್ ಸ್ವಾಗತಿಸಿ, ಹಕೀಮ್ ಮದನಿ ನಿರೂಪಿಸಿದರು. ಅಬೂಬಕ್ಕರ್ ಸಖಾಫಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article