ಮೂಡುಬಿದಿರೆಯಲ್ಲಿ ಶಿಕ್ಷಕರ ದಿನಾಚರಣೆ-ಶಿಕ್ಷಕರು ಸದಾ ಸ್ಮರಣೀಯರು: ಶಾಸಕ ಕೋಟ್ಯಾನ್

ಮೂಡುಬಿದಿರೆಯಲ್ಲಿ ಶಿಕ್ಷಕರ ದಿನಾಚರಣೆ-ಶಿಕ್ಷಕರು ಸದಾ ಸ್ಮರಣೀಯರು: ಶಾಸಕ ಕೋಟ್ಯಾನ್


ಮೂಡುಬಿದಿರೆ: ಶಿಕ್ಷಕರೂ ಮಾತೃ ಹೃದಯವನ್ನು ಹೊಂದಿರುವವರು.  ಶಿಲ್ಪಿಯೊಬ್ಬ ಕಲ್ಲನ್ನು ಮೂರ್ತಿಯನ್ನಾಗಿಸುವಂತೆ, ಶಿಕ್ಷಕರು ವಿದ್ಯಾರ್ಥಿಗಳನ್ನು ಉತ್ತಮ ನಾಗರೀಕರನ್ನಾಗಿ ರೂಪಿಸಿ ಸಮಾಜಕ್ಕೆ ಅರ್ಪಿಸುವ ಮಹತ್ಕಾರ್ಯವನ್ನು ಮಾಡುತ್ತಾರೆ. ಅಂತಹ ಶಿಕ್ಷಕರು ಸದಾ ಸ್ಮರಣೀಯರು ಎಂದು ಶಾಸಕ ಉಮಾನಾಥ ಎ ಕೋಟ್ಯಾನ್ ಹೇಳಿದರು.

ಅವರು ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ತಾಲೂಕು ಮಟ್ಟದ ಶಿಕ್ಷರಕ ದಿನಾಚರಣೆಯನ್ನು ಉದ್ಘಾಟಿಸಿ, ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಗೈದು ಗೌರವ ಸಲ್ಲಿಸಿ ಮಾತನಾಡಿದ ಅವರು

ಶಿಕ್ಷಕ ಕ್ಷೇತ್ರದಲ್ಲಿ ಅನರ್ಘ್ಯ ಸಾಧನೆ ಮಾಡಿ ಅರ್ಹತೆ ಹೊಂದಿದ ಅನೇಕ ಶಿಕ್ಷಕರು `ಪ್ರಶಸ್ತಿಗಳಿಂದ' ವಂಚಿತರಾಗುತ್ತಿದ್ದಾರೆ. ಇಂದು ಪ್ರಶಸ್ತಿ `ವಿಜೇತ'ರು ಜಾಸ್ತಿಯಿದ್ದಾರೆ. ಪ್ರಶಸ್ತಿ ಪುರಸ್ಕೃತರು ಕಡಿಮೆಯಾಗಿದ್ದಾರೆ. ಪ್ರಶಸ್ತಿಯ ಹಿಂದೆ ನಾವು ಹೋಗುವುದಲ್ಲ. ಬದಲಾಗಿ ಪ್ರಶಸ್ತಿ ನಮ್ಮನ್ನು ಅರಸಿ ಬರುವಂತಾಗಬೇಕು ಎಂದು ಮಾರ್ಮಿಕವಾಗಿ ಹೇಳಿದರು.

ಹಾಜಬ್ಬ, ಸಾಲುಮರದ ತಿಮ್ಮಕ್ಕನಂತಹ ವ್ಯಕ್ತಿಗಳನ್ನು ಅರಸಿ ಪ್ರಶಸ್ತಿ ಸನ್ಮಾನಗಳು ಬಂದಿವೆ. ಪ್ರಶಸ್ತಿಗಳ ಹಿಂದೆ ಹೋಗದೆ ಅದಾಗಿ ಲಭಿಸಿದಾಗ ಅದರ ಗೌರವ ಹೆಚ್ಚುತ್ತದೆ, ಮತ್ತು ಸ್ವೀಕರಿಸಿದ ಸಂತೃಪ್ತಿ ಮೂಡುತ್ತದೆ ಎಂದು ಕೋಟ್ಯಾನ್ ಹೇಳಿದರು.

ಸರಕಾರೀ ಉದ್ಯೋಗದ ಪೈಕಿ ಭ್ರಷ್ಟಾಚಾರ ರಹಿತವಾದ ಒಂದು ಕ್ಷೇತ್ರವಿದ್ದರೆ ಅದು ಶಿಕ್ಷಕರ ಕ್ಷೇತ್ರ. ಇದೊಂದು ಗೌರವಯುತವಾದ ಕ್ಷೇತ್ರ ಎಂದು ನಾನು ನಂಬಿದ್ದೇನೆ ಎಂದರು.

ಇತಿಹಾಸ ಸಂಶೋಧಕ ಡಾ.ಪುಂಡಿಕಾಯಿ ಗಣಪಯ್ಯ ಭಟ್ ದಿಕ್ಸೂಚಿ ಭಾಷಣ ಮಾಡಿದರು.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಉದ್ಯಮಿ ಶ್ರೀಪತಿ ಭಟ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್ ಬಿ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ, ಶ್ರೀನಿವಾಸ್, ರಾಮಕೃಷ್ಣ ಶಿರೂರು, ಸೀಮಾ ನಾಯಕ್, ದೊರೆಸ್ವಾಮಿ, ಸುಧಾಕರ ಸಾಲ್ಯಾನ್, ಶಿವಾನಂದ ಕಾಯ್ಕಿಣಿ, ರೊನಾಲ್ಡ್ ಡಿ'ಸೋಜ, ಶಶಿಕಾಂತ್ ಜೈನ್, ನವೀನ್ ಪುತ್ರನ್ , ಸೌಮ್ಯ ಎ.ಎಸ್, ಚಂದ್ರು ಮೊದಲಾದವರಿದ್ದರು.

ರಾಮಕೃಷ್ಣ ಶಿರೂರು ವರದಿವಾಚಿಸಿದರು. ನಿತೀಶ್ ಬಲ್ಲಾಳ್ ಸಂದೇಶ ವಾಚಿಸಿದರು. ನವೀನ್ ಅಂಬೂರಿ ಕಾರ್ಯಕ್ರಮ ನಿರ್ವಹಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article